
ಉಡುಪಿ ನಿಟ್ಟೂರು ಬಳಿ ಟ್ಯಾಂಕರ್ ವಾಹನ ಢಿ#ಕ್ಕಿ; ಪಾದಚಾರಿ ಮೃ#ತ್ಯು
Monday, December 12, 2022
ಉಡುಪಿ (Headlines Kannada): ಟ್ಯಾಂಕರ್ ವಾಹನ ಢಿ#ಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಮೃ#ತಪಟ್ಟ ಘಟನೆ ನಿಟ್ಟೂರು ಬಾಳಿಗ ಫಿಶ್‌ನೆಟ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿ.11ರಂದು ರಾತ್ರಿ 7.45 ಗಂಟೆಗೆ ನಡೆದಿದೆ.
ಮೃ#ತನನ್ನು ಬಾಳಿಗಾ ಫಿಶ್ ನೆಟ್ ಕೆಲಸ ಮಾಡುತ್ತಿದ್ದ 53 ವರ್ಷದ ಹರೇಂದ್ರ ಮರಾಂಡಿ ಎಂದು ಗುರುತಿಸಲಾಗಿದೆ. ಇವರು ನಿಟ್ಟೂರು ಬಳಿ ರಸ್ತೆ ದಾಟಲು ನಿಂತಿದ್ದರು. ಈ ವೇಳೆ ಅಂಬಾಗಿಲು ಕಡೆಯಿಂದ ಉಡುಪಿ ಕರಾವಳಿ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ವಾಹನ ಢಿ#ಕ್ಕಿ ಹೊಡೆದಿದೆ. ಇದರಿಂದ ಗಂ#ಭೀರವಾಗಿ ಗಾ#ಯಗೊಂಡಿದ್ದ ಅವರು, ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಾರಿ ಮಧ್ಯೆ ಕೊ#ನೆಯು#ಸಿರೆಳೆದಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ