ಅಂಡಾರು: ಶಾಲಾ ವಾರ್ಷಿಕೋತ್ಸವ ಮುಗಿಸಿ ಮನೆಗೆ ಬರುತ್ತಿದ್ದ ವ್ಯಕ್ತಿ ಕೆ#ರೆಗೆ ಬಿದ್ದು ಸಾ#ವು
Monday, January 2, 2023
ಹೆಬ್ರಿ(Headlines Kannada): ಶಾಲಾ ವಾರ್ಷಿಕೋತ್ಸವ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರು ಆ#ಕಸ್ಮಿಕವಾಗಿ ಕಾಲು#ಜಾರಿ ಕೆ#ರೆಗೆ ಬಿದ್ದು ಮೃ#ತಪಟ್ಟ ಘಟನೆ ಅಂಡಾರು ಗ್ರಾಮದ ಬೋರ್ಲಬೆಟ್ಟು ಎಂಬಲ್ಲಿ ಜ.1ರಂದು ಬೆಳಕಿಗೆ ಬಂದಿದೆ.
ಮೃ#ತರನ್ನು ಅಂಡಾರು ಗ್ರಾಮದ 45ವರ್ಷದ ಉಮೇಶ್ ರಾವ್ ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸ ಮಾಡುತ್ತಿದ್ದು, ನಿನ್ನೆ ರಾತ್ರಿ ಅಂಡಾರಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ತಡ ರಾತ್ರಿಯಾದರೂ ಮನೆಗೆ ವಾಪಾಸು ಬಾರದ ಕಾರಣ ಮನೆಯವರೆಲ್ಲರೂ ಹುಡುಕಾಟ ನಡೆಸಿದ್ದಾರೆ. ಇಂದು ಬೆಳಿಗ್ಗೆ ಮನೆಯ ಸಮೀಪದ ಕೆರೆಯಲ್ಲಿ ಉಮೇಶ್ ರಾವ್ ಮೃ#ತದೇಹ ಸಿಕ್ಕಿದೆ. ಉಮೇಶ್ ಅವರು ಶಾಲಾ ವಾರ್ಷಿಕೋತ್ಸವ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ ಆ#ಕಸ್ಮಿಕವಾಗಿ ಕಾ#ಲು ಜಾರಿ ಕೆ#ರೆಗೆ ಬಿದ್ದು ಮೃ#ತಪಟ್ಟಿರಬಹುದು ಶಂಕಿಸಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.