
ಮನೆ ಕ#ಳ್ಳತನ ಮಾಡುತ್ತಿದ್ದ ಕು#ಖ್ಯಾತ ಕ#ಳ್ಳರಿಬ್ಬರ ಬಂಧನ; 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ-3 ವಾಹನ ವಶ
ಬ್ರಹ್ಮಾವರ (Headlines Kannada): ಕೋಟಾ ಠಾಣಾ ವ್ಯಾಪ್ತಿಯ ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿ ನಡೆದ ಮನೆ ಕ#ಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗು 3 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಇಬ್ಬರ ಆರೋಪಿಗಳನ್ನು ಎಲ್ಲೂರು ಗ್ರಾಮದ ರಾಜೇಶ ದೇವಾಡಿಗ(38) ಹಾಗು ಕಾರ್ಕಳ ಈದು ಗ್ರಾಮದ ಮೊಹಮ್ಮದ್ ರಿಯಾಜ್ ಹೊಸ್ಮಾರ್(39) ಎಂದು ಗುರುತಿಸಲಾಗಿದೆ.
ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿ ಬೆಂಗಳೂರಿನ ಹೋಟೇಲ್ ಉದ್ಯಮ ನಡೆಸುತ್ತಿದ್ದ ರಾಜೇಶ ಪೂಜಾರಿ ಮನೆಯಲ್ಲಿ 2022ರ ಸೆಪ್ಟಂಬರ್ ತಿಂಗಳಲ್ಲಿ ರಾತ್ರಿ ಕ#ಳ್ಳರು ಮನೆಯ ಬಾಗಿಲು ಒಡೆದು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಆಗಿತ್ತು. ಈ ಬಗ್ಗೆ ಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ರವಿವಾರ ಸಾಯಬರಕಟ್ಟೆ ಬಳಿ ಖಚಿತ ಮಾಹಿತಿಯಂತೆ ವಿಶೇಷ ತಂಡವು ಆರೋಪಿ ಪತ್ತೆಯ ಬಗ್ಗೆ ವಾಹನ ತಪಾಸಣೆ ನಡೆಸುವ ಸಮಯದಲ್ಲಿ ಆರೋಪಿಗಳ ಕಾರು ಪರಿಶೀಲಿಸಿದಾಗ ಅವರ ಬಳಿ ಯಾವುದೇ ದಾಖಲೆಯಿಲ್ಲದ ಚಿನ್ನಾಭರಣಗಳು ಇರುವುದು ಪತ್ತೆಯಾಗಿದೆ. ಈ ವೇಳೆ ರಾಜೇಶ ಪೂಜಾರಿ ಮನೆಯಿಂದ ಕ#ಳವು ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳು ಅ#ಪರಾಧ ಹಿನ್ನೆಲೆಯುಳ್ಳವರಾಗಿದ್ದು, ಇವರ ಮೇಲೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಈ ಇಬ್ಬರು ಆರೋಪಿಗಳು ಹಿರಿಯಡ್ಕ ಜೈಲಿನಲ್ಲಿರುವಾಗ ಪರಿಚಯವಾಗಿದ್ದು ರಾತ್ರಿ ಮನೆ ಕ#ಳ್ಳತನ ನಡೆಸಲು ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕ#ಳ್ಳತನ ನಡೆಸಲು ಸಂಚು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಆರೋಪಿಗಳಿಂದ ಕ#ಳ್ಳತನ ನಡೆಸಿದ ಸುಮಾರು 15 ಲಕ್ಷದ ಚಿನ್ನಾಭರಣ, ಕಳ್ಳತನ ಮಾಡಿದ ಹಣದಿಂದ ಖರೀದಿಸಿದ ಸುಮಾರು 2.50 ಲಕ್ಷ ಸಾವಿರ ಮೌಲ್ಯದ ಕಾರು, ಸುಮಾರು 1 ಲಕ್ಷ ಮೌಲ್ಯದ ಹಿರೋ ಕಂಪೆನಿಯ ಡೆಸ್ಟೀನಿ ಬೈಕ್ ಹಾಗೂ ಕೃ#ತ್ಯಕ್ಕೆ ಬಳಸಿದ ಸುಮಾರು 50000 ಮೌಲ್ಯದ ಹೊಂಡಾ ಆ್ಯಕ್ಟೀವ್ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಕೋಟಾ ಪೊಲೀಸರು ತಿಳಿಸಿದ್ದಾರೆ.