ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾವಿ ಪರ್ಯಾಯ ಪುತ್ತಿಗೆ ಶ್ರೀಗಳಿಗೆ ಪುಟಾಣಿಗಳಿಂದ ಭವ್ಯ ಸ್ವಾಗತ
Monday, January 2, 2023
ಆಸ್ಟ್ರೇಲಿಯಾ(Headlines Kannada): ಪರ್ಯಾಯ ಸಂಚಾರ ನಿಮಿತ್ತ ಉಡುಪಿ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಸ್ವಾಮೀಜಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಇಂದು ಆಸ್ಟ್ರೇಲಿಯಾದ ಸಿಡ್ನಿ ಪಟ್ಟಣಕ್ಕೆ ಆಗಮಿಸಿದ ಭಾವಿ ಪರ್ಯಾಯ ಪುತ್ತಿಗೆ ಶ್ರೀಗಳಿಗೆ ಭವ್ಯ ಸ್ವಾಗತ ಕೋರಲಾಯಿತು.
ಪುತ್ತಿಗೆ ಶ್ರೀಪಾದರನ್ನು ಅಲ್ಲಿನ ಅನಿವಾಸಿ ಭಾರತೀಯ ಪುಟಾಣಿಗಳು ಭಕ್ತಿಗೌರವಾದರಗಳೊಂದಿಗೆ ಗೀತಾ ಪಠಣದೊಂದಿಗೆ ಬರಮಾಡಿಕೊಂಡರು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಂದ ಆಶೀರ್ವಾದ ಪಡೆದರು. ಬಳಿಕ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು.