ಸ್ಪೈಸ್ ಜೆಟ್ ವಿಮಾನಕ್ಕೆ ಬಾಂ#ಬ್ ಬೆ#ದರಿಕೆ ಕರೆ ಮಾಡಿ ಸಿಕ್ಕಿಬಿದ್ದ ಯುವಕರು; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ...
ನವದೆಹಲಿ: ಸ್ಪೈಸ್ ಜೆಟ್ ವಿಮಾನಕ್ಕೆ ಬಾಂ#ಬ್ ಬೆ#ದರಿಕೆ ಕರೆ ಮಾಡಿದ್ದ ಜಾಡನ್ನು ಹುಡುಕಿಕೊಂಡು ಹೋದ ಪೊಲೀಸರಿಗೆ ಕಾದಿತ್ತೊಂದು ಅಚ್ಚರಿಯ ವಿಷಯ. ಅಷ್ಟಕ್ಕೂ ಬೆ#ದರಿಕೆ ಕರೆಯನ್ನು ಪ್ರೇಯಸಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಮೂವರು ಯುವಕರು ಒಟ್ಟು ಸೇರಿ ಮಾಡಿದ್ದು, ಅದರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೇಯಸಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಮೂವರು ವ್ಯಕ್ತಿಗಳು ಸ್ಪೈಸ್ ಜೆಟ್ ವಿಮಾನವನ್ನು ವಿಳಂಬ ಮಾಡುವ ಉದ್ದೇಶದಿಂದ ಈ ಬಾಂ#ಬ್ ಬೆ#ದರಿಕೆ ಕರೆ ಮಾಡಿದ್ದಾರೆ.
ದೆಹಲಿಯ ವಿಮಾನ ನಿಲ್ದಾಣದ ಸ್ಪೈಸ್ ಜೆಟ್ ಕಾಲ್ ಸೆಂಟರ್ ಗೆ ಕರೆಯೊಂದು ಬಂದಿದ್ದು, ವಿಮಾನಕ್ಕೆ ಬಾಂ#ಬ್ ಇಡಲಾಗಿದೆ ಎಂದು ಬೆದರಿಸಿದ್ದರು.ಇದರಿಂದ ಕೆಲ ಕಾಲ ತೀವ್ರ ಆ#ತಂಕ ಉಂಟಾಗಿತ್ತು.
ಹುಸಿ ಬಾಂ#ಬ್ ಕರೆ ಮಾಡಿದವರ ಜಾಡು ಹುಡುಕಿಕೊಂಡು ಹೋದಾಗ ಮೊದಲು ಅಭಿನವ್ ಪ್ರಕಾಶ್ (24) ಎಂಬಾತ ಸಿಕ್ಕಾಕಿಕೊಂಡಿದ್ದಾನೆ. ಈತ ಬ್ರಿಟೀಷ್ ಏರ್ವೇಸ್ ಗೆ ಟಿಕೆಟಿಂಗ್ ಏಜೆಂಟ್ ಆಗಿ ತರಬೇತಿ ಪಡೆಯುತ್ತಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಂ#ಬ್ ಕರೆ ಬಂದ ಹಿನ್ನೆಲೆಯಲ್ಲಿ 182 ಪ್ರಯಾಣಿಕರು ವಿಮಾನಸಿಬ್ಬಂದಿಗಳನ್ನು ತಕ್ಷಣವೇ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಬಂದ ಫೋನ್ ನಂಬರ್ ನ್ನು ಪರಿಶೀಲಿಸಿದಾಗ ಅದು ಅಭಿನವ್ ಪ್ರಕಾಶ್ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿತು. ಕೂಡಲೇ ಅಭಿನವ್ ಪ್ರಕಾಶ್ ಅವರನ್ನು ಬಂ#ಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅಭಿನವ್ ಪ್ರಕಾಶ್ ತನ್ನ ಸ್ನೇಹಿತರಾದ ರಾಕೇಶ್ ಅಲಿಯಾಸ್ ಬಂಟಿ ಹಾಗೂ ಕುನಾಲ್ ಸೆಹ್ರವಾತ್ ಮನಾಲಿಗೆ ಹೋಗಿದ್ದಾಗ ಅಲ್ಲಿ ಇಬ್ಬರು ಯುವತಿಯರೊಂದಿಗೆ ಪರಿಚಯವಾಗಿತ್ತು. ಅದೇ ಇಬ್ಬರೂ ಯುವತಿಯರು ಪುಣೆಗೆ ಎಸ್ ಜಿ 8938 ವಿಮಾನದಲ್ಲೇ ತೆರಳಬೇಕಿತ್ತು. ಯುವತಿಯರೊಂದಿಗೆ ತಾವು ಹೆಚ್ಚು ಸಮಯ ಕಳೆಯಬೇಕಾಗಿದ್ದರಿಂದ ಮೂವರೂ ಸೇರಿ ಹುಸಿ ಬಾಂ#ಬ್ ಕರೆ ಮೂಲಕ ತಮ್ಮ ಯೋಜನೆಯನ್ನು ಯಶಸ್ವಿಯಾಗಿಸಿಕೊಳ್ಳಲು ನಿರ್ಧರಿಸಿದ್ದೇ ಈ ಹೈಡ್ರಾಮಾಗೆ ಕಾರಣ ಎಂಬುದು ಪೋಲೀಸರ ವಿಚಾರಣೆಯ ವೇಳೆ ತಿಳಿದುಬಂದಿದೆ. ಘಟನೆಯ ಬಳಿಕ ಅಭಿನವ್ ನ ಇಬ್ಬರೂ ಸ್ನೇಹಿತರು ಈಗ ನಾಪತ್ತೆಯಾಗಿದ್ದಾರೆ.