JDS ಅಭ್ಯರ್ಥಿಗಳನ್ನು BJPಯವರೇ ದೊಡ್ದು ಕೊಟ್ಟು ನಿಲ್ಲಿಸುತ್ತಿದ್ದು, ಯಾರೂ ಕೂಡ JDSಗೆ ಓಟು ಕೊಡಬೇಡಿ: ಝಮೀರ್ ಅಹ್ಮದ್
ಕಲಬುರಗಿ(Headlines Kannada): JDS ಅಭ್ಯರ್ಥಿಗಳನ್ನು ಬಿಜೆಪಿಯವರೇ ದೊಡ್ದು ಕೊಟ್ಟು ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಈ ಕಾರಣದಿಂದ ಯಾರು ಕೂಡ JDSಗೆ ಓಟು ಕೊಡಬೇಡಿ ಎಂದು ಕಾಂಗ್ರೆಸ್ ನಾಯಕ, ಶಾಸಕ ಝಮೀರ್ ಅಹ್ಮದ್ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, JDSಗೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆಯೇ. ತಾವು ಯಾರು ಕೂಡ ಜೆಡಿಎಸ್ ಅಥವಾ ಬಿಜೆಪಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಹಿಂದೂ, ಮುಸ್ಲಿಮರು ಸಹೋದರರಂತೆ ಪ್ರೀತಿಯಿಂದ ಇದ್ದಾರೆ. ಈ ಮಧ್ಯೆ ಬಿಜೆಪಿ ಹಿಂದೂ, ಮುಸ್ಲಿಂ ಭೇದಭಾವ ಸೃಷ್ಟಿಸಿ, ಗ#ಲಾಟೆ ಮಾಡಿಸಿ ಮತ ಪಡೆಯುತ್ತಿದೆ ಎಂದರು.
ರಾಜ್ಯದಲ್ಲಿ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ಏನೂ ಮಾಡಲಿಲ್ಲ. ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರ ಅನುದಾನ ಕಡಿಮೆ ಮಾಡಿ ದ್ರೋಹ ಬಗೆದಿದ್ದರು. ಆದರೆ ಮುಸ್ಲಿಂರಿಗೆ ಕಾಂಗ್ರೆಸ್ ಹಿಂದಿನಿಂದಲೂ ಎಲ್ಲಾ ನೀಡಿದೆ ಎಂದವರು ಹೇಳಿದರು.
ಕಾಂಗ್ರೆಸಿನಲ್ಲಿದ್ದಾಗ ಸಿ.ಎಂ.ಇಬ್ರಾಹಿಂ ಜೆಡಿಎಸ್ ಖಾಲಿ ಬಸ್ ಅಂತಾ ಹೇಳುತ್ತಿದ್ದರು. ಈಗ ಅವರೇ ಖಾಲಿ ಬಸ್ ಹತ್ತಿದ್ದಾರೆ ಎಂದು ಲೇವಡಿ ಮಾಡಿದ ಝಮೀರ್, ಈ ಭಾರಿ ಜೆಡಿಎಸ್ 15 ರಿಂದ 16 ಸ್ಥಾನ