ವಾಮಂಜೂರು-ತಿರುವೈಲ್ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿದ ಇನಾಯತ್ ಅಲಿ
Friday, March 31, 2023
ಮಂಗಳೂರು: ಜನರ ಜೀವನ ಸುಧಾರಣೆಗೆ ಅನುಕೂಲವಾಗಲಿರುವ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಶುಕ್ರವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ವಾಮಂಜೂರು-ತಿರುವೈಲ್ ವಾರ್ಡ್ ನ ಮನೆ ಮನೆಗೆ ತೆರಳಿ ಮಾಹಿತಿ ನೀಡಲಾಯಿತು.
ಈ ವೇಳೆ ಇನಾಯತ್ ಅಲಿ ಅವರೊಂದಿಗೆ ರಾಜ್ ಕುಮಾರ್ ಶೆಟ್ಟಿ, ಸ್ಟಾನಿ ಕುಟಿನ್ಹಾ, ಶ್ರೀಧರ್ ಜೋಗಿ, ಯೂಸುಫ್ ಮಲ್ಲೂರು, ಶರೀಫ್ ಉಳಾಯಿಬೆಟ್ಟು, ಮೈಯ್ಯದ್ದಿ, ಯಾಕೂಬ್ ರವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.