ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದಿಂದ ಮುದ್ರಕರ ದಿನಾಚರಣೆ
ಉಡುಪಿ: ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ (ರಿ.) ಇದರ ವತಿಯಿಂದ ಮಾರ್ಚ್ 21 ರ ಸಂಜೆ ಉಡುಪಿ ಪುರಭವನದಲ್ಲಿ ಮುದ್ರಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿದ್ದ ಮಂಗಳೂರಿನ ಪ್ರಸಾದ್ ಪ್ರಿಂಟರ್ಸ್ ಮಾಲಕರಾದ ಪ್ರವೀಣ್ ಪತ್ರಾವೊ ಅವರು ಮುದ್ರಣ ರಂಗಕ್ಕೆ ಸಂಬಂಧ ಪಟ್ಟಂತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರೊಂದಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು. ಇನ್ನೋರ್ವ ಅತಿಥಿ ಬ್ರಹ್ಮಾವರದ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಶ ಎ.ಜಿ. ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮುದ್ರಣಾಲಯಗಳ ಹಿರಿಯ ಮಾಲಕರಾದ ಸಿ. ಚಂದ್ರ ನಾಯರಿ ಸಾಲಿಗ್ರಾಮ, ಸತೀಶ್ ನಾಯಕ್ ಮಣಿಪಾಲ, ಮಂಜುನಾಥ ಗಡಿಯಾರ್ ಹೆಜಮಾಡಿ, ರಾಘವೇಂದ್ರ ಆಚಾರ್ಯ ಕೊಟೇಶ್ವರ, ಟಿ. ವಿಜೇಂದ್ರ ಪ್ರಭು ಕಾರ್ಕಳ ಇವರನ್ನು ಸನ್ಮಾನಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿ ಸಂಚಾಲಕರಾದ ಎಂ. ಮಹೇಶ್ ಕುಮಾರ್, ಸಹಸಂಚಾಲಕರಾದ ಅಶೋಕ್ ಶೆಟ್ಟಿ, ಉಡುಪಿ ಮುದ್ರಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ಜಿ. ಸುಬ್ಬರಾವ್ ಇವರು ವೇದಿಕೆಯಲ್ಲಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.
ಉಡುಪಿ ವಲಯ ಅಧ್ಯಕ್ಷರಾದ ಪ್ರಶಾಂತ್ ನಾಯ್ಕ್, ಕಾಪು ವಲಯ ಅಧ್ಯಕ್ಷರಾದ ಸುಧೀರ್ ಬಂಗೇರ, ಬ್ರಹ್ಮಾವರ ವಲಯ ಅಧ್ಯಕ್ಷರಾದ ಜೋಸೆಫ್ ಬಾಂಜ್, ಕಾರ್ಕಳ ವಲಯ ಅಧ್ಯಕ್ಷರಾದ ಪ್ರವೀಣ್ ಶೆಣೈ ಹಾಗೂ ಕುಂದಾಪುರ ವಲಯ ಅಧ್ಯಕ್ಷರಾದ ವಾಸುದೇವ ವರ್ಣ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂದೀಪ್ ಆರ್. ಪೈ ಇವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಶರೀಫ್ ಕೊನೆಯಲ್ಲಿ ಧನ್ಯವಾದವಿತ್ತರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.