ಮುಂದೆ ನಿಂತಿರುವವರು ನಗ್ನವಾಗಿ ಕಾಣುವಂಥ ಕನ್ನಡಕ ನೀಡಿ ವಂಚನೆ: 4 ಮಂದಿ ಬಂಧನ

ಮುಂದೆ ನಿಂತಿರುವವರು ನಗ್ನವಾಗಿ ಕಾಣುವಂಥ ಕನ್ನಡಕ ನೀಡಿ ವಂಚನೆ: 4 ಮಂದಿ ಬಂಧನ

ಚೆನ್ನೈ: ರೈಸ್ ಪುಲ್ಲಿಂಗ್ ದಂದೆ ನಡೆಸುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಇವರು ನಕಲಿ ಕನ್ನಡಕವನ್ನು (ಮುಂದೆ ನಿಂತಿರುವವರು ನಗ್ನವಾಗಿ ಕಾಣುವಂತ) ಮಾರಾಟ ಮಾಡಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಎಮ್‌ಬಿಟಿ ಪೊಲೀಸರು ಕೋಯಂಬೇಡು ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಸಹಾಯಕ ಕಮಿಷನರ್ ರಮೇಶ್ ಬಾಬು ನೇತೃತ್ವದ ತಂಡ ಶೋಧ ನಡೆಸಿದಾಗ ಕೊಠಡಿಯೊಂದರಲ್ಲಿ ನಾಲ್ವರು ಪಿಸ್ತೂಲ್, ಗುಂಡುಗಳು, ಕೆಲವು ಲೋಟಗಳು ಮತ್ತು ರೈಸ್ ಪುಲ್ಲಿಂಗ್ ಯಂತ್ರಗಳು ಪತ್ತೆಯಾಗಿವೆ.

ತನಿಖೆಯ ನಂತರ, ಬೆಂಗಳೂರಿನ ನಿವಾಸಿಗಳಾದ ಶಿವ ಅಲಿಯಾಸ್ ಸೂರ್ಯ (39), ಕುಗೈಪ್ (37), ಜಿತು (24) ಮತ್ತು ಇರ್ಷಾದ್ (21) ಎಂಬ ನಾಲ್ವರು ಜನರಿಗೆ ದೊಡ್ಡ ಮೊತ್ತದ ಹಣವನ್ನು ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ನಾಲ್ವರು ರೈಸ್ ಪುಲ್ಲಿಂಗ್ ಮಾಡುವ ಪುರಾತನ ಕಾಲದ ಕೋಟ್ಯಂತರ ರೂಪಾಯಿ ಬೆಲೆ ಬಾಳು ವಸ್ತುವನ್ನು ಕೊಡುವುದಾಗಿ ನಂಬಿಸಿ ಸಾರ್ವಜನಿರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಿಡಿಲು ಬಡಿದ ಚೆಂಬಿನಿಂದ ರೈಸ್ ಪುಲ್ಲಿಂಗ್ ಮಾಡಲು ಸಾಧ್ಯ ಎಂದು ಜನರನ್ನು ನಂಬಿಸುತ್ತಿದ್ದರು.

ತಮ್ಮ ಎದುರಿಗಿರುವವರನ್ನು ಬೆತ್ತಲೆಯಾಗಿ ಕಾಣಲು ಸಹಾಯ ಮಾಡುವ ಕನ್ನಡಕವನ್ನು ಮಾರಾಟ ಮಾಡುವ ನೆಪದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಪೊಲೀಸರು ಗ್ಯಾಂಗ್ ನಿರ್ದಿಷ್ಟವಾಗಿ ಆರೋಪಿಸಿದ್ದಾರೆ. ಅನೇಕ ಸಂತ್ರಸ್ತರು ಈ ಕನ್ನಡಕವನ್ನು ಪಡೆಯಲು ಲಾಡ್ಜ್‌ನಲ್ಲಿ ಮುಗಿಬಿದ್ದಾಗ ಗ್ಯಾಂಗ್ ನಕಲಿ ಪಿಸ್ತೂಲ್‌ನಿಂದ ಬೆದರಿಸಿ ಹಣವನ್ನು ದೋಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಎಮ್‌ಬಿಟಿ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article