ಹೊರಬಿದ್ದ ಚುನಾವಣಾ ಪೂರ್ವ ಸಮೀಕ್ಷೆ: ಕಾಂಗ್ರೆಸ್‌‌ಗೆ ಹೆಚ್ಚು ಸ್ಥಾನ: ಅತಂತ್ರ ವಿಧಾನಸಭೆ ಸುಳಿವು ನೀಡಿದ ಸಮೀಕ್ಷೆ

ಹೊರಬಿದ್ದ ಚುನಾವಣಾ ಪೂರ್ವ ಸಮೀಕ್ಷೆ: ಕಾಂಗ್ರೆಸ್‌‌ಗೆ ಹೆಚ್ಚು ಸ್ಥಾನ: ಅತಂತ್ರ ವಿಧಾನಸಭೆ ಸುಳಿವು ನೀಡಿದ ಸಮೀಕ್ಷೆ

ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದ್ದು, ಚುನಾವಣಾ ಪೂರ್ವ ಸಮೀಕ್ಷೆ ಏನು ಹೇಳಿದೆ ನೋಡೋಣ ಬನ್ನಿ...

ಆಡಳಿತಾರೂಢ ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೇರಲು ಸರ್ವ ಪ್ರಯತ್ನ ನಡೆಸಿದ್ದು, ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಕೇಂದ್ರ ಬಿಜೆಪಿ ಸರ್ಕಾರದ ಸಚಿವರು, ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರೂ, ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯನ್ನು ನಿಭಾಯಿಸಲು ಸಾಧ್ಯವಾಗಿಲ್ಲ ಎಂಬುದನ್ನು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಕೂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿತ್ತು. ಇದೀಗ ಸೀವೋಟರ್ ಚುನಾವಣೋತ್ತರ ಸಮೀಕ್ಷೆಯು ಲಭ್ಯವಾಗಿದ್ದು, ಕಾಂಗ್ರೆಸ್‌ಗೆ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ಯಾವ ಪಕ್ಷಕ್ಕೂ ಬಹುಮತ ಮತದಾರ ನೀಡಿಲ್ಲದಿದ್ದರೂ, ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ.

ಸಿ ವೋಟರ್ (C-Voter)

ಬಿಜೆಪಿ- 83-95

ಕಾಂಗ್ರೆಸ್- 100-112

ಜೆಡಿಎಸ್- 21-29

ಇತರೆ- 02-06


ರಿಪಬ್ಲಿಕ್ (Republic)

ಬಿಜೆಪಿ- 85-100

ಕಾಂಗ್ರೆಸ್- 94-108

ಜೆಡಿಎಸ್- 24-32

ಇತರೆ- 02-06

 

ಜೀ ನ್ಯೂಸ್  (Zee News)

ಬಿಜೆಪಿ - 79-94

ಕಾಂಗ್ರೆಸ್ - 103-118

ಜೆಡಿಎಸ್- 25-33

ಇತರೆ 02-05

 

ನ್ಯೂಸ್ ನೇಷನ್ಸ್-ಸಿಜಿಎಸ್

ಬಿಜೆಪಿ- 114

ಕಾಂಗ್ರೆಸ್- 86

ಜೆಡಿಎಸ್- 21

ಇತರೆ- 03


ಪೋಲ್ ಸ್ಟಾರ್ಟ್

ಬಿಜೆಪಿ- 88-98

ಕಾಂಗ್ರೆಸ್- 99-109

ಜೆಡಿಎಸ್- 21-26

ಇತರೆ- 02-04

 

ನವಭಾರತ್ (Navbharath)

ಬಿಜೆಪಿ- 78-92

ಕಾಂಗ್ರೆಸ್- 106-120

ಜೆಡಿಎಸ್- 20-26

ಇತರೆ- 02-04


 ಟೈಮ್ಸ್ ನೌ (Times Now)

ಬಿಜೆಪಿ- 85

ಕಾಂಗ್ರೆಸ್-  113

ಜೆಡಿಎಸ್- 23 

ಇತರೆ- 03

Ads on article

Advertise in articles 1

advertising articles 2

Advertise under the article