ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಹಣ ವಶ
Sunday, March 17, 2024
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಉದ್ಯಮಿಯೊಬ್ಬರು ತಡರಾತ್ರಿ ಸಾಗಿಸುತ್ತಿದ್ದ ಹಣವನ್ನು ಚೆಕ್‌ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸೂರು ಮೂಲದ ನಾರಾಯಣ್ ಎಂಬ ವ್ಯಕ್ತಿಯಿಂದ ಹಣ ಸೀಜ್ ಮಾಡಲಾಗಿದೆ. ಕೋಳಿ ವ್ಯಾಪಾರ ಮಾಡುತ್ತಿದ್ದು, ಅಂಗಡಿಗಳಿಂದ ಹಣ ಕಲೆಕ್ಟ್ ಮಾಡಿಕೊಂಡು ಹೋಗುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರ ಮುಂದೆ ನಾರಾಯಣ್ ಹೇಳಿಕೊಂಡಿದ್ದಾನೆ.
ಸುಮಾರು 12.16 ಲಕ್ಷ ರೂ. ಹಣವನ್ನು ಅಶೋಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಸೀಜ್ ಮಾಡಲಾಗಿದೆ. ಘಟನೆ ಸಂಬಂಧ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಸಂಗ್ರಹ ಮಾಡಿರುವ ಬಗ್ಗೆ ದಾಖಲೆಗಳು ಇಲ್ಲದ ಕಾರಣ ಹಣ ಸೀಜ್ ಮಾಡಲಾಗಿದೆ. ನೆಲಮಂಗಲ ಟೌನ್ ಸ್ಟೇಷನ್ ವ್ಯಾಪ್ತಿಯಲ್ಲೂ ಹಣ ಸೀಜ್ ಆಗಿದೆ. ದಾಖಲೆ ಇಲ್ಲದ ಎಂಟು ಲಕ್ಷ ಹಣವನ್ನು ನೆಲಮಂಗಲ ಟೌನ್ ಸ್ಟೇಷನ್ ವ್ಯಾಪ್ತಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.