
ಯುನೈಟೆಡ್ ಪಡುಬಿದ್ರಿಯನ್ಸ್ ಯುಎಇ ವತಿಯಿಂದ ಹಜ್ಜ್ ಯತ್ರಾರ್ಥಿಗರಿಗೆ ಸನ್ಮಾನ
ಹಜ್ ಇಸ್ಲಾಂ ಧರ್ಮದ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಅದನ್ನು ಮಾಡಲು ಬಯಸುತ್ತಾರೆ. ಆದರೆ, ಕೆಲವರಿಗೆ ಮಾತ್ರ ಈ ಅವಕಾಶ ಸಿಗುತ್ತದೆ.
ಈ ವರ್ಷ ಭಾರತೀಯರೂ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ಮುಸ್ಲಿಮರು ಈ ಪವಿತ್ರ ಕರ್ತವ್ಯವನ್ನು ಪೂರೈಸಲು ಮಕ್ಕಾಕ್ಕೆ ಪ್ರಯಾಣಿಸಿದ್ದಾರೆ. ಅವರು ಶನಿವಾರದಂದು ತಮ್ಮಹಜ್ಜ್ ನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ, ವಿಶೇಷವಾಗಿ ಅರಾಫಾದಲ್ಲಿ ನಿಲ್ಲುವ ನಿರ್ಣಾಯಕ ವಿಧಿಯನ್ನು ಅವರು ಆಚರಿಸಿದ್ದಾರೆ.
ಯುಎಇಯಿಂದ ಈ ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಂಡವರಲ್ಲಿ ಹಲವಾರು ಮಂಗಳೂರಿಗರೂ ಒಳಗೊಂಡಿದ್ದಾರೆ. ಯುನೈಟೆಡ್ ಪಡುಬಿದ್ರಿಯನ್ಸ್ ಯುಎಇಯ ಸಕ್ರಿಯ ಸದಸ್ಯರಾದ ಪಡುಬಿದ್ರಿಯ ಮುಹಮ್ಮದ್ ಆಸಿಫ್ ಅವರಲ್ಲಿ ಒಬ್ಬರು.
ಅವರು ತಮ್ಮ ಪರಿವಾರ ಸಮೇತ ಮಕ್ಕಾಕ್ಕೆ ತೆರಳಿದ್ದು, ಈ ಪ್ರಯುಕ್ತ ಅವರನ್ನು, ಯುನೈಟೆಡ್ ಪಡುಬಿದ್ರಿಯನ್ಸ್ ಯು ಎ ಇ, ಇದರ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಕಾರ್ಯಕ್ರಮವನ್ನು, ಯುನೈಟೆಡ್ ಪಡುಬಿದ್ರಿಯನ್ಸ್ ಯು ಎ ಇ, ಇದರ ಅಧ್ಯಕ್ಷ ಅಬ್ದುಲ್ ಮುತ್ತಲಿಬ್ ಪಡುಬಿದ್ರಿ, ಉಪಾಧ್ಯಕ್ಷ ಹಿದಾಯತುಲ್ಲಾ ಸತ್ತಾರ್ ಪಡುಬಿದ್ರಿ ಅವರ ನೇತೃತ್ವದಲ್ಲಿ ಫ್ರಾಷ್ಟಿ ಫ್ಲೇವರ್ (Frosty & Flavor) ರೆಷ್ಟೋರೆಂಟ್ ಶಾರ್ಜದಲ್ಲಿ ಆಹ್ವಾನಿತ ಸದಸ್ಯರ ಸಮ್ಮುಖದಲ್ಲಿ ನೆರೆವೇರಿಸಲಾಯಿತು.
ಪಡುಬಿದ್ರಿ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಪಿ.ಎ. ರಹಿಮಾನ್ ಪಡುಬಿದ್ರಿ ಹಾಗೂ ಅಬ್ದುಲ್ ಜಲೀಲ್ ಸಾಹೆೇಬ್ ಉಪಸ್ಥಿತರಿದ್ದು ಹಜ್ ಗೆ ಹೊರಟಿರುವ ಮುಹಮ್ಮದ್ ಆಸಿಫ್ ರವರಿಗೆ ಶುಭ ಹಾರೈಸಿದರು.
ಕಮಿಟಿ ಕಾರ್ಯದರ್ಶಿ ಮಾಝಿನ್ ಪಡುಬಿದ್ರಿ , ಕೋಶಾಧಿಕಾರಿ ಅಯಾಝ್ ಮೇಲಂಗಡಿ ಪಡುಬಿದ್ರಿ, ಹಾಗೂ ಸದಸ್ಯರಾದ ಆಝಂ ಕಂಚಿನಡ್ಕ, ಹಾರಿಸ್ ಪಡುಬಿದ್ರಿ ಹಾಗೂ ನೆರೆದಿರುವ ಸಬಿಕರ ಸಮ್ಮುಖದಲ್ಲಿ ಮುಹಮ್ಮದ್ ಆಸಿಫ್ ರವರಿಗೆ ಶಾಲು ಹೊದಿಸಿ, ಹಣ್ಣು ಹಂಪಲುಗಳ ತಟ್ಟೆ ಹಾಗೂ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯ್ತು.