ಇಸ್ರೇಲ್-ಅಮೆರಿಕಕ್ಕೆ ಪ್ರತಿದಾಳಿಯ ಬೆದರಿಕೆ ಹಾಕಿದ ಇರಾನ್‌ ನ ಸರ್ವೋಚ್ಚ ನಾಯಕ ಖಮೇನಿ

ಇಸ್ರೇಲ್-ಅಮೆರಿಕಕ್ಕೆ ಪ್ರತಿದಾಳಿಯ ಬೆದರಿಕೆ ಹಾಕಿದ ಇರಾನ್‌ ನ ಸರ್ವೋಚ್ಚ ನಾಯಕ ಖಮೇನಿ

ದುಬೈ: ಇರಾನ್ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲಿನ ದಾಳಿಗಳಿಗೆ ಪ್ರತಿಯಾಗಿ ತೀವ್ರ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್‌ ನ ಸರ್ವೋಚ್ಚ ನಾಯಕ ಅಯತ್ ಉಲ್ಲಾ ಅಲಿ ಖಮೇನಿ ಅವರು ಇಸ್ರೇಲ್ ಮತ್ತು ಅಮೆರಿಕಕ್ಕೆ ಬೆದರಿಕೆ ಹಾಕಿದ್ದಾರೆ.

ಇರಾನ್‌ನ ಸೇನಾ ನೆಲೆಗಳು ಮತ್ತು ಇತರ ಸ್ಥಳಗಳನ್ನು ಗುರಿಯಾಸಿ ಇಸ್ರೇಲ್ ಇತ್ತೀಚೆಗೆ ನಡೆಸಿದ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವ ತವಕವನ್ನು ಖಮೇನಿ ಈ ಮೂಲಕ ವ್ಯಕ್ತಪಡಿಸಿದ್ದಾರೆ.

ಎರಡೂ ಕಡೆಯಿಂದ ನಡೆಯುವ ಯಾವುದೇ ಹೆಚ್ಚಿನ ದಾಳಿಗಳು ಯುದ್ಧವನ್ನು ಮತ್ತಷ್ಟು ವ್ಯಾಪಕಗೊಳಿಸುವ ಮತ್ತು ಮಧ್ಯಪ್ರಾಚ್ಯದಾದ್ಯಂತ ಆವರಿಸುವ ಸಾಧ್ಯತೆಯಿದೆ.

ಈಗಾಗಲೇ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಹಮಾಸ್ ನಡುವಿನ ಯುದ್ಧ, ಲೆಬನಾನ್ ಮೇಲಿನ ಇಸ್ರೇಲ್ ಅಕ್ರಮಣದಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಇದು ವಿಶಾಲ ಪ್ರಾದೇಶಿಕ ಸಂಘರ್ಷವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

"ಶತ್ರು ರಾಷ್ಟ್ರಗಳು ಇಸ್ರೇಲ್ ಆಗಿರಲಿ ಅಥವಾ ಅಮೆರಿಕನೇ ಆಗಿರಲಿ, ಇರಾನ್ ಮತ್ತು ಅದರ ಮಿತ್ರ ರಾಷ್ಟ್ರಗಳ ವಿರುದ್ಧ ಮಾಡುತ್ತಿರುವ ದಾಳಿಗಳಿಗೆ ಪ್ರತಿಯಾಗಿ ತೀವ್ರ ಪ್ರತಿದಾಳಿ ಎದುರಿಸಬೇಕಾಗುತ್ತದೆ' ಎಂದು ಖಮೇನಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಈ ಕುರಿತ ಅವರ ವಿಡಿಯೊವನ್ನು ಇರಾನ್ ಸರ್ಕಾರಿ ಮಾಧ್ಯಮ ಬಿಡುಗಡೆ ಮಾಡಿದೆ.

ಆದರೆ, ಈ ದಾಳಿಯು ಯಾವಾಗ ನಡೆಯುತ್ತದೆ ಮತ್ತು ಅದರ ವ್ಯಾಪ್ತಿ ಎಷ್ಟಿರಬಹುದು ಎಂಬುದನ್ನು ಖಮೇನಿ ವಿವರಿಸಿಲ್ಲ. ಅಮೆರಿಕದ ದೀರ್ಘ ಶ್ರೇಣಿಯ ಬಿ-52 ಬಾಂಬರ್‌ಗಳು, ಟ್ಯಾಂಕರ್‌ಗಳು ಸೇರಿದಂತೆ ಭಾರಿ ಪ್ರಮಾಣದ ಯುದ್ಧೋಪಕರಣಗಳು ಮಧ್ಯಪ್ರಾಚ್ಯ ತಲುಪಿದ ಬೆನ್ನಲ್ಲೇ ಖಮೇಲಿ ಅವರಿಂದ ತೀವ್ರ ಪ್ರತಿರೋಧದ ಕುರಿತ ಪ್ರತಿಕ್ರಿಯೆ ಬಂದಿದೆ.

Ads on article

Advertise in articles 1

advertising articles 2

Advertise under the article