ನನ್ನ ಗಂಡನಿಗೆ ಒಳ್ಳೆ ಸಂಸ್ಕಾರ ಇದೆ, ಆರ್‌ಎಸ್‌ಎಸ್‌ನಿಂದ ಬಂದೋರು: ಸಿಟಿ ರವಿ ಪತ್ನಿ ಪಲ್ಲವಿ
ಚಿಕ್ಕಮಗಳೂರು : ನನಗೆ ಭಯ ಆಗಿತ್ತು, ಅವರು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ, ಅವರ ಲೊಕೇಶನ್ ಎಲ್ಲೆಲ್ಲೋ ತೋರಿಸುತ್ತಿತ್ತು ಎಂದು ಸಿಟಿ ರವಿ ಪತ್ನಿ ಹೇಳಿದ್ದಾರೆ. ಚಿಕ್ಕಮಗಳೂರಲ್ಲಿ ಮಾತನಾಡಿದ ಅವರು, ಒಮ್ಮೆ ಡ್ಯಾಂ, ಮತ್ತೊಮ್ಮೆ ರೆಸಾರ್ಟ್ ಎಲ್ಲೆಲ್ಲೋ ತೋರಿಸುತ್ತಿತ್ತು, ಎಫ್‌ಐಆರ್ ಮಾಡಿದ್ದು ಬೇಜಾರಿಲ್ಲ, ಕಸ್ಟಡಿಗೆ ಕೊಡಬೇಕಿತ್ತು, ಬಿಡುಗಡೆಯ ನಂತ್ರ ಮಾತನಾಡಿದ್ರು, ಆರ್. ಅಶೋಕ್, ವಿಜಯೇಂದ್ರ ಧೈರ್ಯ ತುಂಬಿದ್ರು, ಇಂದು ಬೆಂಗಳೂರು ಹೋಗ್ತಾರೇ ನಾಳೆ ಮಂಡ್ಯ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೇ, ಏನೂ ಸುಸ್ತು ಆಗಿಲ್ಲ ಅಂದಿದ್ದಾರೆ, ಆಸ್ಪತ್ರೆಗೆ ಹೋಗಿ ಟ್ರಿಟ್ಮೆಂಟ್ ತೆಗೆದುಕೊಳ್ಳಲು ಹೇಳಿದೆ ಎಂದು ಸಿಟಿ ರವಿ ಪತ್ನಿ ಪಲ್ಲವಿ ಹೇಳಿದರು.
ಅವರಿಗೆ ಒಳ್ಳೆ ಸಂಸ್ಕಾರ ಇದೆ, ಆರ್‌ಎಸ್‌ಎಸ್‌ನಿಂದ ಬಂದೋರು ಅವರು, ಅವರ ಬಾಯಲ್ಲಿ ಇಂಥ ಶಬ್ಧ ಬಂದಿದೆ ಅಂದ್ರೆ ನಮಗೆ ನಂಬೋಕೆ ಆಗಲ್ಲ, ಸರ್ಕಾರ ಅವರದ್ದೇ ಇರೋದ್ರಿಂದ ಹೇಗೆ ಬಿಂಬಿಸ್ತಾರೆ ಎಲ್ಲರೂ ನಂಬೋ ಥರ ಮಾಡಿದ್ರು ಎಂದು ಹೇಳಿದರು. ನನ್ನ ಗಂಡ ಮಹಿಳೆಯರ ಬಗ್ಗೆ ಗೌರವ ನೀಡುತ್ತಾರೆ. ನಮ್ಮ ಮನೆಗೆ ಬರುವ ಪ್ರತಿ ಹೆಣ್ಣು ಮಕ್ಕಳನ್ನು ಗೌರವದಿಂದ ನಡೆದುಕೊಳ್ಳುತ್ತಾರೆ ಅಂತ ಪತಿ ಪರ ಪಲ್ಲವಿ ಮಾತನಾಡಿದ್ದಾರೆ. ನಾನು ಮಂಗಳೂರಿಗೆ ಹೋಗಿದ್ದೆ, ಟಿವಿಯಲ್ಲಿ ನ್ಯೂಸ್ ನೋಡಿ ಮಾಹಿತಿ ಗೊತ್ತಾಯ್ತು ಅಂತ ಅವರು ಹೇಳಿದ್ದಾರೆ.