ಬಾಯಿಬಿಟ್ಟರೆ ಬರೀ ಸುಳ್ಳು ಹೇಳುವ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಯಕ್ಕಿಲ್ಲ: ರಮೇಶ್‌ ಜಾರಕಿಹೊಳಿ ವಾಗ್ದಾಳಿ

ಬಾಯಿಬಿಟ್ಟರೆ ಬರೀ ಸುಳ್ಳು ಹೇಳುವ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಯಕ್ಕಿಲ್ಲ: ರಮೇಶ್‌ ಜಾರಕಿಹೊಳಿ ವಾಗ್ದಾಳಿ

ಬೆಳಗಾವಿ: ಬಿಜೆಪಿ ಪಾಳಯದ ಬಣ ಬಡಿದಾಟ ಸದ್ಯ ದೆಹಲಿ ಅಂಗಳದಲ್ಲಿದೆ. ನಿನ್ನೆ ಶಿಸ್ತು ಸಮಿತಿ ಮುಂದೆ ಹಾಜರಾಗಿದ್ದ ಶಾಸಕ ಯತ್ನಾಳ್‌ಗೆ, ಹೈಕಮಾಂಡ್ ಖಡಕ್ ಆಗಿಯೇ ಸೂಚನೆ ನೀಡಿದೆ. ಪಕ್ಷದ ಸಂಘಟನೆಗಾಗಿ ಕೆಲಸ ಮಾಡಿ. ನಿಮಗೆ ಭವಿಷ್ಯ ಇದೆ. ಶಾಂತ ಸ್ವಭಾವದಿಂದ ವರ್ತಿಸುವಂತೆ ತಿಳಿಹೇಳಿದೆ. ಆದರೆ ಈ ಮಧ್ಯೆ ದೆಹಲಿಯಿಂದ ಆಗಮಿಸುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ರಮೇಶ್ ಜಾರಕಿಹೊಳಿ‌ ವಾಗ್ದಾಳಿ ಮಾಡಿದ್ದಾರೆ.

ಬಿವೈ ವಿಜಯೇಂದ್ರ ಬಾಯಿಬಿಟ್ಟರೆ ಬರೀ ಸುಳ್ಳು ಹೇಳುತ್ತಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಗಂಭೀರವಾಗಿ ಕೆಲಸ ಮಾಡಬೇಕು. ಆದರೆ ಬಿವೈ ವಿಜಯೇಂದ್ರ ಬಹಳ ಹತಾಶೆ ಭಾವನೆಯಿಂದ ಅಧ್ಯಕ್ಷ ಸ್ಥಾನ ನಡೆಸುತ್ತಿದ್ದಾನೆ. ವಕ್ಫ್ ವಿರುದ್ಧ ಹೋರಾಟಕ್ಕೆ ನಾವು ಬಹಳಷ್ಟು ಮನವಿ ಮಾಡಿದ್ದೆವು ಎಂದು ಹೇಳಿದ್ದಾರೆ. 

ಇನ್ನು ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಯಕ್ ಇಲ್ಲ ಅಂತಾ ಪದೇ ಪದೇ ಹೇಳುತ್ತೇವೆ. ಹೈಕಮಾಂಡ್​ಗೂ ಮನವರಿಕೆ ಆಗಿದೆ. ಯಾವುದೇ ಟೈಮ್​ನಲ್ಲಿ ಏನೋ ತಿಳಿದು ಮಾಡಿದ್ದಾರೆ. ಮಾಡಿದ ಬಳಿಕ ಅವನ ನಡುವಳಿಕೆ ತಿಳ್ಸಿಕೊಟ್ಟಿದ್ದೇವೆ. ಮುಂದೆ ಏನು ಮಾಡ್ತಾರೆ ನೋಡೋಣ. ಅಧ್ಯಕ್ಷರ ಬದಲಾವಣೆ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ‌ ಎಂದಿದ್ದಾರೆ.

ಹೈಕಮಾಂಡ್ ಯಾರಿಗೂ ಏನೂ ಸೂಚನೆ ಕೊಟ್ಟಿಲ್ಲ. ಜೆಪಿಸಿ ಕಮೀಟಿಗೆ ರಿಪೋರ್ಟ್ ಕೊಟ್ಟು ಬಳಿಕ ರಾಜನಾಥ್ ಸಿಂಗ್, ಹಿರಿಯರನ್ನ ಭೇಟಿ ಆಗಿದ್ದೇವೆ. ವಕ್ಪ್ ಮುಂದುವರೆಸಿ ಒಳ್ಳೆ ಕೆಲಸ ಮಾಡ್ತಿದೀರಿ ಅಂತಾ ಹೇಳಿದ್ದಾರೆ. ಅಧಿವೇಶನದ ನಡುವೆ ಬಳ್ಳಾರಿ, ವಿಜಯನಗರ ಜಿಲ್ಲೆ ಮಾಡಬೇಕು ಅಂತಾ ಇದೆ. ತಯಾರಿ ನಡೆಸಿದ ಮೇಲೆ ಎರಡನೇ ಹಂತದ ದಿನಾಂಕ ಘೋಷಣೆ ಮಾಡುತ್ತೇವೆ. ಮೇಲುಗೈ ಯಾರದ್ದು ಆಗುತ್ತೆ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು. ಅವರು ಏನೂ ತೀರ್ಮಾನ ತೆಗೆದುಕೊಳ್ಳುತ್ತಾರೆ ಒಪ್ಪುತ್ತೇವೆ. ನಮ್ಮ ಪರವಾಗಿ ಕೊಡ್ತಾರೋ ಯಾರ ಪರವಾಗಿ ಕೊಡ್ತಾರೆ ಗೊತ್ತಿಲ್ಲ. ನಮ್ಮ ಪಕ್ಷದ ವಿಚಾರ ಇದೆ ಆಂತರಿಕವಾಗಿ ಬಗೆ ಹರಿಸುತ್ತೇವೆ ಎಂದರು.

ಇದೆ ವೇಳೆ ವಕ್ಫ್ ವಿಚಾರವಾಗಿ ಜೆಪಿಸಿ ಅಧ್ಯಕ್ಷರನ್ನು ಭೇಟಿಯಾಗಿ ಬಂದಿದ್ದೇವೆ. ವಕ್ಫ್ ವಿರುದ್ಧದ ಮೊದಲ ಹಂತದ ಹೋರಾಟದ ವರದಿ ಸಲ್ಲಿಸಿದ್ದೇವೆ. ವಕ್ಫ್ ವಿರುದ್ಧ 2ನೇ ಹಂತದ ಹೋರಾಟಕ್ಕೆ ದಿನಾಂಕ ನಿಗದಿ ಮಾಡ್ತೇವೆ. ನಮ್ಮ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

Ads on article

Advertise in articles 1

advertising articles 2

Advertise under the article