ಒಳಮೀಸಲಾತಿಗಾಗಿ ಜಾತಿ ಗಣತಿ ವೇಳೆ ಬಹು ಸಂಖ್ಯಾತರಾದ ಮಾದಿಗರು ಎಸ್ಸಿ ಎಂದು ಉಪ ಜಾತಿ ನಮೂದಿಸಿ: ಮಲ್ಲು ಹಲಗಿ ಕುರುಕುಂದ

ಒಳಮೀಸಲಾತಿಗಾಗಿ ಜಾತಿ ಗಣತಿ ವೇಳೆ ಬಹು ಸಂಖ್ಯಾತರಾದ ಮಾದಿಗರು ಎಸ್ಸಿ ಎಂದು ಉಪ ಜಾತಿ ನಮೂದಿಸಿ: ಮಲ್ಲು ಹಲಗಿ ಕುರುಕುಂದ

ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಸಮುದಾಯಗಳ ದತ್ತಾಂಶಗಳ ಆಧಾರದ ಮೇಲೆ ರಾಜ್ಯ ಸರ್ಕಾರಗಳೇ ಮೀಸಲಾತಿ ನೀಡಬಹುದು ಎಂದು ಕಳೆದ ಆಗಸ್ಟ್ 1ರಂದು ಸುಪ್ರೀಮ್ ಕೋರ್ಟ್ ತೀರ್ಪು ನೀಡಿತು. ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಒಳ ಮೀಸಲಾತಿ ಅನುಷ್ಠಾನಕ್ಕೆ ಎಲ್ಲ ಸಿದ್ಧತೆ ನಡೆದಿವೆ. ರಾಜ್ಯದಲ್ಲಿ ಒಳಮೀಸಲಾತಿಯ ಅನುಷ್ಠಾನಕ್ಕಾಗಿ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವನ್ನು ನೇಮಕ ಮಾಡಿತ್ತು. ನಾವು ಆಂಜನೇಯನ ಗುಡಿಗೂ, ಯೇಸುವಿನ ಚರ್ಚಿಗೂ, ಗುರುದ್ವಾರಕ್ಕೂ  ಹೋಗಿ ಪೂಜಿಸುತ್ತೇವೆ, ಆದರೂ ನಾವು ನಮ್ಮ ಮೂಲ ಜಾತಿ ಮಾದಿಗ ಇರುತ್ತದೆ. ಅದಕ್ಕಾಗಿ ಪರಿಶಿಷ್ಟ ಜಾತಿಯ ವಿವಿಧ ಜಾತಿಗಳ ನಿಖರ ಮಾಹಿತಿಗಾಗಿ ಮತ್ತೊಮ್ಮೆ ಜಾತಿ ಗಣತಿ ನಡೆಸುವಂತೆ ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ನೀಡಿದ್ದು, ರಾಜ್ಯ ಸರ್ಕಾರ ಒಪ್ಪಿಕೊಂಡು ಜಾತಿ ಗಣತಿ ನಡೆಸಲು ಆದೇಶ ಹೊರಡಿಸಿದೆ. ಮೇ ತಿಂಗಳಲ್ಲಿ ಗಣತಿ ಕಾರ್ಯ ಆರಂಭವಾಗುತ್ತದೆ. ಗಣತಿದಾರರು ಮನೆ ಮನೆಗೂ ಬಂದಾಗ ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಯೇಸುವನ್ನು ಪೂಜಿಸುವರು ಕ್ರಿಶ್ಚಿಯನ್ ಎಂದು ಬರಿಸಬೇಡಿ, ಪರಿಶಿಷ್ಟ ಜಾತಿಯವರು ತಮ್ಮ ಮೂಲ ಜಾತಿ  ಮಾದಿಗ ಎಂದು ಬರೆಸಬೇಕು.

ಈ ಬಗ್ಗೆ ನಿರ್ಲಕ್ಷ ಮಾಡದೆ ಕಾಳಜಿ ವಹಿಸಿ ಒಂದು ವೇಳೆ ನಿರ್ಲಕ್ಷ ಮಾಡಿದರೆ ಅನ್ಯಾಯ ಕಟ್ಟಿಟ್ಟ ಬುತ್ತಿ. ಅದಕ್ಕಾಗಿ ಮಾದಿಗ ಸಮುದಾಯದ ಎಲ್ಲ ರಾಜಕೀಯ ವ್ಯಕ್ತಿಗಳು, ಸಂಘಟನೆಯ ಎಲ್ಲಾ ವಿವಿಧ ಪದಾಧಿಕಾರಿಗಳು, ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು, ನಗರ ಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರು, ನಿವೃತ್ತ ಅಧಿಕಾರಿಗಳು, ಹಾಗೂ ಪದವಿ ವಿದ್ಯಾರ್ಥಿಗಳು ಎಲ್ಲರೂ ಸೇರಿ ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ಜಾಗೃತಿ ವಹಿಸಬೇಕು. ಗಣತಿದಾರರು ಎಲ್ಲೋ ಒಂದು ಕಡೆ ಕುಳಿತು ಗಣತಿ ಮಾಡಬಾರದು. ಕೆಲವರು ಹೊಟ್ಟೆ ಪಾಡಿಗಾಗಿ ಹಳ್ಳಿಯಿಂದ ಸಿಟಿ ಬೆಂಗಳೂರಿಗೆ ಹೋಗಿರುತ್ತಾರೆ. ಅಂತವರನ್ನು ಬಿಡದೆ ಗುರುತಿಸಿ  ಮನೆ ಮನೆಗೂ ಭೇಟಿ ನೀಡಿ ನಿಖರವಾದ ಮಾಹಿತಿ ಸಂಗ್ರಹಿಸುವಂತೆ ನಿಗಾವಹಿಸಬೇಕು. ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಎಸ್ಸಿ ವಿಭಾಗ ಸಂ.ಕಾರ್ಯದರ್ಶಿ ಮಲ್ಲು ಹಲಗಿ ಕುರಕುಂದ ಅವರು ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article