
ಇದು ಆಸ್ಟ್ರೇಲಿಯಾದ ಮೇಲ್ಬೋರ್ನೂ ಅಲ್ಲ, ಚೀನಾದ ಬೀಜಿಂಗೂ ಅಲ್ಲ...ಸಚಿವ ಈಶ್ವರ್ ಖಂಡ್ರೆ ಅವರ ಕನಸಿನ ಕ್ರೀಡಾ ಸಂಕೀರ್ಣ! ದಶಕಗಳ ಬೇಡಿಕೆ ಭಾಲ್ಕಿಗೆ ರಾಷ್ಟ್ರಮಟ್ಟದ ಕ್ರೀಡಾ ಸಂಕೀರ್ಣ!
Saturday, April 12, 2025

ಸಚಿವ ಈಶ್ವರ ಖಂಡ್ರೆ ಅವರ ಸತತ ಪ್ರಯತ್ನದ ಫಲವಾಗಿ, ₹14.75 ಕೋಟಿ ಅನುದಾನದಡಿ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ರಾಷ್ಟ್ರಮಟ್ಟದ ಮಟ್ಟದ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣವಾಗಲಿದೆ.
ಸುಮಾರು 18 ಎಕರೆ ವಿಶಾಲ ಭೂಮಿಯಲ್ಲಿ ನಿರ್ಮಿಸಲಾಗುವ ಈ ಕ್ರೀಡಾ ಸಂಕೀರ್ಣದ ಶಂಕುಸ್ಥಾಪನೆ ಇದೇ ಏಪ್ರಿಲ್ 16ರಂದು ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ನೆರವೇರಲಿದೆ. ಇದು ಬೀದರ್ ಜಿಲ್ಲೆಯ ಖಂಡ್ರೆ ಅಭಿಮಾನಿಗಳಲ್ಲಿ ಸಂತಸ ಸಂಭ್ರಮ ಮೂಡಿಸಿದೆ.
ಈ ಕ್ರೀಡಾಂಗಣದಿಂದಾಗಿ ಭಾಲ್ಕಿ ಹಾಗೂ ಬೀದರ ಜಿಲ್ಲೆಯ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ, ಸ್ಪರ್ಧಾ ಅವಕಾಶಗಳು ಮತ್ತು ಸದೃಢ ಶಾರೀರಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಮಹತ್ವದ ವೇದಿಕೆ ಕಲ್ಪಿಸಿದಂತಾಗಿದೆ ಎಂದು ಈಶ್ವರ್ ಖಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.