
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
Sunday, June 15, 2025
ದುಬೈ: ಶುಕ್ರವಾರ ತಡರಾತ್ರಿ ದುಬೈ ಮರೀನಾದಲ್ಲಿರುವ 67 ಅಂತಸ್ತಿನ ವಸತಿ ಗೋಪುರವಾದ 'ಮರೀನಾ ಪಿನಾಕಲ್' ಒಳಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಸುಮಾರು 6 ಗಂಟೆಗಳ ನಂತರ ಅಗ್ನಿಶಾಮಕ ದಳ ಮತ್ತು ಇತರ ಅಧಿಕಾರಿಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಈ ಎತ್ತರದ ಕಟ್ಟಡದಲ್ಲಿ 3,820 ನಿವಾಸಿಗಳಿದ್ದರು, ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈ ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ. ಆಗಸದೆತ್ತರಕ್ಕೆ ಹೊಗೆ ಹರಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಅಗ್ನಿ ಅವಘಡ ನಡೆಯುತ್ತಿದ್ದಂತೆ, ದುಬೈ ನಾಗರಿಕ ರಕ್ಷಣಾ ತಂಡಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ, 764 ಅಪಾರ್ಟ್‌ಮೆಂಟ್‌ಗಳಿಂದ 3,820 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದವು. ವಿಶೇಷ ತಂಡಗಳು ಎಲ್ಲರನ್ನೂ ಕಟ್ಟಡದಿಂದ ಸುರಕ್ಷಿತವಾಗಿ ಹೊರಗೆ ಕರೆತಂದವು.