'ಉಡುಪಿ ಉಚ್ಚಿಲ ದಸರಾ'; ಡಾ.ಜಿ.ಶಂಕರ್ ಸಮ್ಮುಖದಲ್ಲಿ ಭವ್ಯ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ; ಹಲವು ಗಣ್ಯರು ಭಾಗಿ

'ಉಡುಪಿ ಉಚ್ಚಿಲ ದಸರಾ'; ಡಾ.ಜಿ.ಶಂಕರ್ ಸಮ್ಮುಖದಲ್ಲಿ ಭವ್ಯ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ; ಹಲವು ಗಣ್ಯರು ಭಾಗಿ

ಫೋಟೋ: ಸಚಿನ್ ಉಚ್ಚಿಲ 

ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ 4ನೇ ವರ್ಷದ 'ಉಡುಪಿ ಉಚ್ಚಿಲ ದಸರಾ – 2025'ರ ಭವ್ಯ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ವೈಭವದ ಶೋಭಾಯಾತ್ರೆಗೆ ಉಚ್ಚಿಲ ದಸರಾ ರೂವಾರಿ, ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್ ಸಮ್ಮುಖದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು. 

ಈ ವೇಳೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಆನಂದನ್ ಸಿ.ಕುಂದರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಕಾರ್ಯದರ್ಶಿ ಶರಣ್‌ಕುಮಾರ್‌ ಮಟ್ಟು, ಉದಯ ಕುಮಾರ್ ಹಟ್ಟಿಯಂಗಡಿ, ಯುವರಾಜ್ ಮಸ್ಕತ್, ವಿನಯ ಕರ್ಕೇರ,   ಶಿವಕುಮಾರ್ ಮೆಂಡನ್, ಶೇಖರ್ ಸಾಲ್ಯಾನ್, ಸತೀಶ್ ಕುಂದರ್, ಶಿಲ್ಪಾ ಕುಂದರ್, ಉಷಾ ರಾಣಿ, ಸಂಧ್ಯಾದೀಪ ಸುನಿಲ್, ಸುಗುಣ, ಪದ್ಮಾಕರ್, ಕೇಶವ ಕೋಟ್ಯಾನ್, ಯುವರಾಜ್ ಕಿದಿಯೂರು, ಗಿರೀಶ್ ಕುಮಾರ್, ಶಿಲ್ಪಾ ಗಂಗಾಧರ್ ಸುವರ್ಣ, ಸತೀಶ್ ಅಮೀನ್ ಪಡುಕೆರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಗಣ್ಯರು ಮತ್ತು ಡ್ರೋನ್ ಮೂಲಕ ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪ ಸಿಂಚನ ಮಾಡಲಾಯಿತು.

60ಕ್ಕೂ ಅಧಿಕ ಟ್ಯಾಬ್ಲೋಗಳು ಶೋಭಾಯಾತ್ರೆಗೆ ಮೆರುಗು ತಂದಿದ್ದು, ಸಾವಿರಾರು ಜನರು ರಾಷ್ಟ್ರೀಯ ಹೆದ್ದಾರಿ 66 ಸುತ್ತಮುತ್ತ ಭವ್ಯ ಶೋಭಾ ಯಾತ್ರೆ ವೀಕ್ಷಿಸುತ್ತಿರುವುದು ಕಂಡು ಬಂತು.
















Ads on article

Advertise in articles 1

advertising articles 2

Advertise under the article