ಸಚಿವ ಈಶ್ವರ್ ಬಿ ಖಂಡ್ರೆಯವರನ್ನು ಭೇಟಿ ಮಾಡಿ ಶುಭಕೋರಿದ ಯುವ ಮುಂದಾಳು ಎ.ಕೆ. ಅನ್ಸಾಫ್
ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಚಿವ ಈಶ್ವರ್ ಬಿ ಖಂಡ್ರೆ ಅವರನ್ನು ಖಂಡ್ರೆ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಮಂಗಳೂರು ಮೂಲದ ಖಂಡ್ರೆ ಅಭಿಮಾನಿ ಯುವ ಮುಂದಾಳು ಎ.ಕೆ. ಅನ್ಸಾಫ್ ರವರು ಭೇಟಿ ಮಾಡಿ ಅಭಿನಂದಿಸಿ ಶುಭ ಕೋರಿದ್ದಾರೆ..
ಪ್ರಬಲ ವೀರಶೈವ ಸಮುದಾಯದ ಪ್ರತಿಷ್ಠಿತ ಅಖಿಲ ಭಾರತ ವೀರಶೈವ ಮಹಾಸಭಾ ಇದರ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರು ಇತ್ತೀಚಿಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ..
ಸಮುದಾಯದ ಹಿರಿಯ ನಾಯಕರೂ , ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಸಚಿವ ಈಶ್ವರ್ ಖಂಡ್ರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಖಂಡ್ರೆಯವರು ಮಹಾಸಭಾದ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಖಂಡ್ರೆ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಎ ಕೆ ಅನ್ಸಾಫ್ ಅವರು ಬೆಂಗಳೂರಿನ ಸಚಿವರ ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಶುಭ ಕೋರಿದ್ದಾರೆ..
ಈಶ್ವರ್ ಬಿ ಖಂಡ್ರೆ ಅವರ ಅಭಿಮಾನಿಗಳ ಟೀಂ ಖಂಡ್ರೆ ವಿದ್ ಇಂಟಿಗ್ರಿಟಿ ಮೂಲಕ ಪರಿಸರ, ಕೃಷಿ, ಆರೋಗ್ಯ , ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿರುವ ಯುವ ಮುಂದಾಳು ಎ.ಕೆ.ಅನ್ಸಾಫ್ ರವರು ಇತ್ತೀಚೆಗೆ ಕರ್ನಾಟಕ ಸರಕಾರದಿಂದ ಉಡುಪಿ ಜಿಲ್ಲಾ ವ್ಯಾಪ್ತಿಯ ಕಡಲ ತೀರ ವಲಯ ನಿರ್ವಹಣ ಸಮಿತಿ ಸದಸ್ಯರಾಗಿ ನಿಯೋಜನೆಗೊಂಡಿದ್ದಾರೆ..