ಸೌದಿ ಅರೇಬಿಯಾ; ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅಕ್ಬರ್ ಅಲಿ ಇಬ್ರಾಹಿಂ ಮರು ಆಯ್ಕೆ

ಸೌದಿ ಅರೇಬಿಯಾ; ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅಕ್ಬರ್ ಅಲಿ ಇಬ್ರಾಹಿಂ ಮರು ಆಯ್ಕೆ

ಜುಬೈಲ್: ಸೌದಿ ಅರೇಬಿಯಾದ ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್​ (AQWA KSA) ಇದರ 40ನೇ ವಾರ್ಷಿಕ ಮಹಾಸಭೆಯು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಜುಬೈಲ್ ನ  ಸಾಫ್ರೋನ್ ರೆಸ್ಟೋರೆಂಟ್ ನಲ್ಲಿ ನಡೆಯಿತು.



ಸಂಸ್ಥೆಯ ಅಧ್ಯಕ್ಷರಾದ ಅಕ್ಬರ್ ಅಲಿ ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಮಾಸ್ಟರ್ ಉಮ್ಮರ್ ಅಬ್ದುಲ್ಲಾ ಮತ್ತು ಮೊಹಮ್ಮದ್ ಅಮಾದ್ ಅವರು ಪರಿಶುದ್ಧ ಕುರಾನಿನ ಶ್ಲೋಕವನ್ನು ಪಠಿಸುವ ಮೂಲಕ ವಾರ್ಷಿಕ ಮಹಾಸಭೆಯನ್ನು ಆರಂಭಿಸಲಾಯಿತು.

ಸ್ವಾಗತ ಮತ್ತು ಆಸನ ಸ್ವೀಕಾರ ಕಾರ್ಯಕ್ರಮವನ್ನು ಅಬ್ದುಲ್ ಕರೀಮ್ ಅವರು ನೆರವೇರಿಸಿ ಕೊಟ್ಟರು. ಸಂಸ್ಥೆಯ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿಯಾದ ಎಂ.ಇಸ್ಮಾಯಿಲ್ ಅಬ್ದುಲ್ಲಾ ವಾಚಿಸಿದರು. ಸಂಸ್ಥೆಯ ವಾರ್ಷಿಕ ಆಯವ್ಯಯವನ್ನು ಶಮೀಮ್ ಮೊಹಮ್ಮದ್ ಮಂಡಿಸಿದರು. 

2026-27ನೇ ಸಾಲಿನ ಪದಾಧಿಕಾರಿಗಳನ್ನು ನೇಮಿಸಲು ಚುನಾವಣಾಧಿಕಾರಿಯಾಗಿ ಅಶ್ರಫ್ ಬೆಂಗಳೂರು ಅವರು ಸಹಕರಿಸಿದರು. ಈ ಸಂದರ್ಭದಲ್ಲಿ ಮೂಳೂರು ಜಮಾತಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಅನ್ವರ್ ಹುಸೇನ್ ಅವರನ್ನು ಸನ್ಮಾನಿಸಲಾಯಿತು.

ಈ ಬಾರಿಯ ಇಫ್ತಾರ್ ಕೂಟವನ್ನು ಫೆಬ್ರವರಿ 27 ಶುಕ್ರವಾರ ಜುಬೈಲ್ ನಲ್ಲಿ ಮಾಡುವುದೆಂದು ತೀರ್ಮಾನಿಸಲಾಯಿತು. ಫ್ಯಾಮಿಲಿ ಗೆಟ್ ಟುಗೆದರ್ ಮೇ 7 ಗುರುವಾರದಂದು ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಿ, ಇದರ ಸಂಪೂರ್ಣ ಉಸ್ತುವಾರಿಯನ್ನು ಅಶಿಲ್ ಅಕ್ಬರ್ ಮತ್ತು ಮೊಹಮ್ಮದ್ ಹುಸೇನ್ ತೀರ್ಥಹಳ್ಳಿಗೆ ನೀಡಲಾಯಿತು.

ವಾರ್ಷಿಕ ಮಹಾಸಭೆಯ ಕಾರ್ಯಕ್ರಮದ ನಿರೂಪಣೆಯನ್ನು ಅಬ್ದುಲ್ ಕರೀಮ್ ರವರು ನೆರವೇರಿಸಿ ಕೊಟ್ಟರು. ಧನ್ಯವಾದ ಸಮರ್ಪಣೆ ಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್ ಅಬ್ದುಲ್ಲಾ ಮಾಡಿದರು. 

ನೂತನ ಪದಾಧಿಕಾರಿಗಳು 

ಅಧ್ಯಕ್ಷರು-ಅಕ್ಬರ್ ಅಲಿ ಇಬ್ರಾಹಿಂ

ಉಪಾಧ್ಯಕ್ಷರು-ಜುಬೈಲ್ ವಲಯ-ಅಮಾನ್ ಮುರಾದ್ ಅಲಿ,

ದಮ್ಮಾಮ್ ಮತ್ತು ಕೋಬರ್ ವಲಯ -ತಸ್ಮೀರ್ ತಾಜು.

ಪ್ರಧಾನ ಕಾರ್ಯದರ್ಶಿ -ಎಂ.ಇಸ್ಮಾಯಿಲ್ ಅಬ್ದುಲ್ಲಾ

ಜೊತೆ ಕಾರ್ಯದರ್ಶಿ -ಅಬ್ದುಲ್ ವಹಾಬ್

ಕೋಶಾಧಿಕಾರಿ-ಶಮೀಮ್ ಮೊಹಮ್ಮದ್

ಜೊತೆ ಕೋಶಾಧಿಕಾರಿ-ಸದರುದ್ದೀನ್ ಆಜಬ್ಬ

ಲೆಕ್ಕ ಪರಿಶೋಧಕ-ಮೊಹಮ್ಮದ್ ಅಲಿ 

ಗೌರವ ಅಧ್ಯಕ್ಷರು-ಮೊಹಮ್ಮದ್ ಸಿದ್ದೀಕ್ ಶಂಶುದ್ದೀನ್

ಹಿರಿಯ ಸಲಹೆಗಾರರಾಗಿ-ಅಬ್ದುಲ್ ಕರೀಮ್, ಅಬ್ದುಲ್ ಅಂಖಾಲಿಕ್, ಅಬ್ದುಲ್ ಅಝೀಝ್, ಹಾರಿಸ್ ಯೂಸುಫ್

ಸಂಸ್ಥೆಯ ಊರಿನ ಪ್ರತಿನಿಧಿಯಾಗಿ-ಮುರಾದ್ ಅಲಿ 

Ads on article

Advertise in articles 1

advertising articles 2

Advertise under the article