ಬಿಗ್‌ಬಾಸ್ ಸೀಸನ್ ರನ್ನರ್ ರಕ್ಷಿತಾ ಶೆಟ್ಟಿಗೆ ಹುಟ್ಟೂರಲ್ಲಿ ಅದ್ಧೂರಿ ಸ್ವಾಗತ
Wednesday, January 21, 2026
ಪಡುಬಿದ್ರೆ: ಬಿಗ್‌ಬಾಸ್ ಸೀಸನ್ 12ರ ರನ್ನರ್ ಅಪ್ ಪ್ರಶಸ್ತಿ ಗೆದ್ದು ಹುಟ್ಟೂರಿಗೆ ಆಗಮಿಸಿದ ರಕ್ಷಿತಾ ಶೆಟ್ಟಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್ ಗೇಟ್ ಬಳಿ ರಕ್ಷಿತಾಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ರನ್ನರ್ ಅಪ್ ಪ್ರಶಸ್ತಿ ಗೆದ್ದು ಹುಟ್ಟೂರಿಗೆ ಆಗಮಿಸಿದ ರಕ್ಷಿತಾ ಶೆಟ್ಟಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ರಕ್ಷಿತಾಳಿಗೆ ಅಭಿನಂದನೆ ಕೋರಲು ಹೆಜಮಾಡಿ ಟೋಲ್ ಗೇಟ್ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಹೆಜಮಾಡಿಗೆ ಬರುತ್ತಿದ್ದಂತೆ ಹೂಗುಚ್ಛ, ಹಾರಗಳನ್ನು ಹಾಕಿ ಅಭಿಮಾನಿಗಳು ಅಭಿನಂದಿಸಿದರು. ರಕ್ಷಿತಾ ಜೊತೆ ಸೆಲ್ಫಿ ಕಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಹುಟ್ಟೂರು ಪಡುಬಿದ್ರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ರಕ್ಷಿತಾ ಶೆಟ್ಟಿ ಆಗಮಿಸಿದ್ದು, ರಸ್ತೆಯುದ್ದಕ್ಕೂ ರಕ್ಷಿತಾ ಪರ ಜೈಕಾರ ಕೂಗಿ, ಸ್ವಾಗತಿಸಲಾಯಿತು.