ದುಬೈ; ತವಕ್ಕಲ್ ಓವರ್ಸೀಸ್ ನೂತನ ಅಧ್ಯಕ್ಷರಾಗಿ ಅಶ್ಫಾಕ್ ಉಚ್ಚಿಲ, ಪ್ರ.ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಝಬೀಹ್, ಖಜಾಂಚಿಯಾಗಿ ಅಶ್ರಫ್ ಶೇಖ್ ಆಯ್ಕೆ

ದುಬೈ; ತವಕ್ಕಲ್ ಓವರ್ಸೀಸ್ ನೂತನ ಅಧ್ಯಕ್ಷರಾಗಿ ಅಶ್ಫಾಕ್ ಉಚ್ಚಿಲ, ಪ್ರ.ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಝಬೀಹ್, ಖಜಾಂಚಿಯಾಗಿ ಅಶ್ರಫ್ ಶೇಖ್ ಆಯ್ಕೆ

ದುಬೈ: ತವಕ್ಕಲ್ ಓವರ್ಸೀಸ್ ದುಬೈ ಇದರ 30ನೇ ವಾರ್ಷಿಕ ಮಹಾ ಸಭೆಯು ಶನಿವಾರ ಶಾರ್ಜಾದಲ್ಲಿ ನಡೆಯಿತು.

ತನ್ವೀರ್ ಅಹ್ಮದ್  ಅವರ ಅಧ್ಯಕ್ಷತೆಯಲ್ಲಿ ನಡೆದ ಈ ವಾರ್ಷಿಕ ಮಹಾಸಭೆಯಲ್ಲಿ 2026ರ ಅವಧಿಗೆ ನೂತನ ಅಧ್ಯಕ್ಷರಾಗಿ ಅಶ್ಫಾಕ್ ಉಚ್ಚಿಲ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಝಬೀಹ್, ಖಜಾಂಚಿಯಾಗಿ ಅಶ್ರಫ್ ಶೇಖ್ ಅವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ರಚನೆ

ಉಪಾಧ್ಯಕ್ಷರು-ಶಮೀರ್ ಅಹ್ಮದ್

ಗೌರವಾಧ್ಯಕ್ಷರು – ಮೊಹಮ್ಮದ್ ದಾವೂದ್

ಜೊತೆ ಕಾರ್ಯದರ್ಶಿ – ಹಸನ್ ಅದ್ದು 

ಲೆಕ್ಕಪರಿಶೋಧಕ (ಆಡಿಟರ್) – ಅಬ್ದುಲ್ ಖಾದರ್

ಆಪ್‌(App) ಇನ್‌ಚಾರ್ಜ್ – ಅಬ್ದುಲ್ ಅಝೀಮ್

ಸಾರ್ವಜನಿಕ ಸಂಪರ್ಕ (PR) ಇನ್‌ಚಾರ್ಜ್ – ಅಬ್ದುಲ್ ರಝಾಕ್

ಸಮಿತಿ ಸದಸ್ಯರು – ಇಲಿಯಾಸ್ ಅಹ್ಮದ್, ಅಹ್ಮದ್ ಜಮಾಲ್, ಬಿಲಾಲ್ ಮೊಹಮ್ಮದ್, ಇಮ್ತಿಯಾಝ್ ಉಡುಪಿ, ಶಾಹಿದ್ ನೆಜಾರ್, ತೌಶೀನ್, ರಾಹಿಲ್ ಅಹ್ಮದ್, ಜಿಯಾದ್ ಕಣ್ಣಗಾರ್, ಅದ್ನಾನ್ ದಳ್ವಾಯಿ, ರಫೀಕ್ ಕಟ್ಟಿಂಗೆರಿ, ಹನೀಫ್ ಬಜ್ಪೆ






ಸಭೆಯಲ್ಲಿ 'ತವಕ್ಕಲ್'ನ  ನೂತನ ವೆಬ್‌ಸೈಟ್ ಗೆ  ತನ್ವೀರ್ ಅಹ್ಮದ್ ಅವರು ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಹನೀಫ್ ಬಜ್ಪೆ ಹಾಗು ಸಮದ್ ಬಿರಾಲಿ ಭಾಗವಹಿಸಿದ್ದರು.

ಸಭೆಯ ಆರಂಭದಲ್ಲಿ ಮೊಹಮ್ಮದ್ ಝಾಹಿ ಇಸ್ಮಾಯಿಲ್ ಕಿರಾತ್  ಪಠಿಸಿದರು. ಮೊಹಮ್ಮದ್ ಬಿಲಾಲ್ ಅತಿಥಿಗಳನ್ನು ಸ್ವಾಗತಿಸಿದರು. 2025ರ ವಾರ್ಷಿಕ ವರದಿ ಮಂಡನೆ ಹಾಗೂ ಅನುಮೋದನೆಯನ್ನು ಇಸ್ಮಾಯಿಲ್ ಝಬೀಹ್ ನೆರವೇರಿಸಿದರು. ಅಬ್ದುಲ್ ಅಝೀಮ್ ಅವರು 2025ರ ವಾರ್ಷಿಕ ಹಣಕಾಸು ವರದಿ ಮಂಡಿಸಿ, ಅನುಮೋದನೆಯನ್ನು ಪಡೆದುಕೊಂಡರು. ಇದೆ ವೇಳೆ ನಿರ್ಗಮಿತ ಅಧ್ಯಕ್ಷ ಇಲಿಯಾಸ್ ಅಹ್ಮದ್ ಅವರು ತಮ್ಮ ಅನಿಸಿಕೆ, ಅಭಿಪ್ರಾಯವನ್ನು ಹಂಚಿಕೊಂಡರು.






ಅಬ್ದುಲ್ ಅಝೀಮ್ ಅವರು 'ತವಕ್ಕಲ್'ನ ಆಪ್‌ ಪ್ರದರ್ಶನವನ್ನು ನಡೆಸಿಕೊಟ್ಟರು. 'ತವಕ್ಕಲ್'ನ ಮುಂದಿನ ಯೋಜನೆ (ಪ್ರಾಜೆಕ್ಟ್) ಬಗ್ಗೆ ಅಬ್ದುಲ್ ರಝಾಕ್ ಅವರು ಮಾಹಿತಿ ನೀಡಿದರು. ಇದೆ ವೇಳೆ ಸಾಮಾಜಿಕ ಕಾರ್ಯಕರ್ತ ಸಮದ್ ಬಿರಾಲಿ ಅವರನ್ನು ಸನ್ಮಾನಿಸಲಾಯಿತು. ರಮೀನ್ ಅಬ್ದುಲ್ ರಝಾಕ್ ಕೊನೆಯಲ್ಲಿ ವಂದನಾರ್ಪಣೆ ಗೈದರು.

Ads on article

Advertise in articles 1

advertising articles 2

Advertise under the article