ಮಂಗಳೂರು: ನೀಟ್-ಪಿಜಿ (NEET-PG) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 21ನೇ ರ‍್ಯಾಂಕ್ ಗಳಿಸಿ, ಎಂಬಿಬಿಎಸ್ ಪದವಿಯಲ್ಲಿ 13 ಚಿನ್ನದ ಪದಕಗಳನ್ನು ಪಡೆದಿರುವ ಡಾ. ಅಫ್ಲಾ ರಫೀಕ್ ಅವರನ್ನು ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ (ರಿ.) ಹಾಗೂ ಬ್ರಿಡ್ಜ್‌ಸ್ಟೋನ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್, ಮಂಗಳೂರು ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಮಂಗಳೂರಿನ ಪ್ರೇರಣಾದಾಯಕ ಭಾಷಣಗಾರ ರಫೀಕ್ ಮಾಸ್ಟರ್ ಅವರ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿದ್ದು, ಡಾ. ಅಫ್ಲಾ ರಫೀಕ್ ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಅಭಿನಂದಿಸಿದರು.
