‘ಪಠಾಣ್​’ ಸಿನಿಮಾದ ಹಾಡಿನ ವಿವಾದ; ಜಿ#ಹಾದಿ ಶಾರುಖ್ ಖಾನ್ ಸಿಕ್ಕರೆ ಜೀ#ವಂತವಾಗಿ ಸು#ಡುತ್ತೇನೆ ಎಂದು ಬೆ#ದರಿಕೆ ಹಾಕಿದ ಅಯೋಧ್ಯೆ ಸ್ವಾಮೀಜಿ

‘ಪಠಾಣ್​’ ಸಿನಿಮಾದ ಹಾಡಿನ ವಿವಾದ; ಜಿ#ಹಾದಿ ಶಾರುಖ್ ಖಾನ್ ಸಿಕ್ಕರೆ ಜೀ#ವಂತವಾಗಿ ಸು#ಡುತ್ತೇನೆ ಎಂದು ಬೆ#ದರಿಕೆ ಹಾಕಿದ ಅಯೋಧ್ಯೆ ಸ್ವಾಮೀಜಿಮುಂಬೈ (Headlines Kannada): ಶಾರುಖ್ ಖಾನ್ ಅಭಿನಯದ ‘ಪಠಾಣ್​’ ಸಿನಿಮಾದ ‘ಬೇಷರಂ ರಂಗ್​..’ ಹಾಡನ್ನು ವಿವಾದಕ್ಕೀಡು ಮಾಡಲಾಗಿದ್ದು, ಪರ-ವಿರೋಧ ಹೇಳಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿ#ಕಿನಿ ಧರಿಸಿರುವ ‘ಬೇಷರಂ ರಂಗ್​..’ ಹಾಡನ್ನು ವಿವಾದಕ್ಕೀಡು ಮಾಡಲಾಗಿದ್ದು, ಹಲವರು ಈ ಸಿನಿಮಾ ಬ್ಯಾನ್ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ ಅಯೋಧ್ಯೆಯ ಸ್ವಾಮೀಜಿಯೊಬ್ಬರು ನೀಡಿದ ಹೇಳಿಕೆ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಶಾರುಖ್ ಖಾನ್ ಅವರನ್ನು ಜೀ#ವಂತವಾಗಿ ಸು#ಡುತ್ತೇನೆ ಎಂಬುದಾಗಿ ಸ್ವಾಮೀಜಿಯೊಬ್ಬರು ಬೆ#ದರಿಕೆಯನ್ನು ಹಾಕಿದ್ದು ಈಗ ಸದ್ದು ಮಾಡುತ್ತಿದೆ.

ಕೇಸರಿ ಬಣ್ಣ ಹಿಂದೂಗಳ ಪಾಲಿಗೆ ವಿಶೇಷವಾಗಿದೆ. ಆದರೆ, ಪಠಾಣ್ ಸಿನೆಮಾದ ‘ಬೇಷರಂ ರಂಗ್​..’ ಹಾಡಿನಲ್ಲಿ ಈ ಬಣ್ಣಕ್ಕೆ ಅ#ವಮಾನ ಮಾಡಲಾಗಿದೆ ಎಂದು ಅನೇಕರು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಅಯೋಧ್ಯೆಯ ಪರಮಹಂಸ ಆಚಾರ್ಯ ಅವರು ಈ ಹಾಡಿನ ವಿವಾದದ ಕುರಿತು ಮಾತನಾಡಿದ್ದಾರೆ. ಅವರು ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

‘ಇಂದು ನಾವು ನಟ ಶಾರುಖ್ ಖಾನ್ ಅವರ ಪೋಸ್ಟರ್ ಅನ್ನು ಸು#ಟ್ಟು ಹಾ#ಕಿದ್ದೇವೆ. ಜಿ#ಹಾದಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕರೆ ಅವರನ್ನು ಜೀ#ವಂ#ತವಾಗಿ ಸು#ಡುತ್ತೇನೆ’ ಎಂದು ಪರಮಹಂಸ ಆಚಾರ್ಯ ಬೆ#ದರಿಕೆ ಹಾಕಿದ್ದಾರೆ ಎಂಬುದಾಗಿ ಎಐಎನ್​ಎಸ್​ ಸುದ್ದಿ ಸಂಸ್ಥೆ ತಿಳಿಸಿದೆ.

‘ಪಠಾಣ್ ಸಿನೆಮಾ ಥಿಯೇಟರ್​ನಲ್ಲಿ ರಿಲೀಸ್ ಆದರೆ ನಾನು ಆ ಸಿನಿಮಾ ಮಂದಿರಕ್ಕೆ ಬೆಂ#ಕಿ ಇಡು#ತ್ತೇನೆ’ ಎಂದು ಕೂಡ ಪರಮಹಂಸ ಆಚಾರ್ಯ ಹೇಳಿದ್ದಾರೆ. ಅವರ ಇಂಥ ಪ್ರ#ಚೋದನಾಕಾರಿ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಓರ್ವ ಸ್ವಾಮೀಜಿ ಆಗಿ ಅವರು ಈ ರೀತಿ ಕೇಳಿಕೆ ನೀಡಬಾರದಿತ್ತು ಎಂಬ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article