ಜಾರ್ಖಂಡಿನ ಜೈನ ಧರ್ಮದ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಘೋಷಿಸಿರುವ ಆದೇಶ ರದ್ದುಪಡಿಸಿ: ಉಡುಪಿಯಲ್ಲಿ ಜೈನರ ಆಗ್ರಹ

ಜಾರ್ಖಂಡಿನ ಜೈನ ಧರ್ಮದ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಘೋಷಿಸಿರುವ ಆದೇಶ ರದ್ದುಪಡಿಸಿ: ಉಡುಪಿಯಲ್ಲಿ ಜೈನರ ಆಗ್ರಹ

ಉಡುಪಿ(Headlines Kannada): ಜಾರ್ಖಂಡ್ ನ ಗಿರಡಿ ಜಿಲ್ಲೆಯ ಜೈನ ಧರ್ಮದ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಘೋಷಿಸಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು‌ ಆಗ್ರಹಿಸಿ ಉಡುಪಿ ಜಿಲ್ಲೆಯ ಜೈನ ಸಮುದಾಯದವರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ.

ಜಾರ್ಖಂಡ್ ನ ಸಮ್ಮೇದ ಶಿಖರ್ಜಿಯು ಜೈನ ಧರ್ಮದ ಅನಾದಿ- ಪರಮ ಪಾವನ ಕ್ಷೇತ್ರ. ಇದು ಜೈನರ 20 ತೀರ್ಥಂಕರರು ಮುಕ್ತಿ ಹೊಂದಿದ ಸ್ಥಳವಾಗಿದೆ. ಇದರ ದರ್ಶನಕ್ಕಾಗಿ ವಿಶ್ವದ ನಾನಾಭಾಗಗಳಿಂದ ಜೈನರು ಧಾವಿಸಿ ಬರುತ್ತಿದ್ದಾರೆ. ಬ್ರಿಟಿಷರೂ ಕೂಡ ಇದು ಜೈನರ ಪುಣ್ಯಕ್ಷೇತ್ರ ಎಂದು ಆದೇಶ ನೀಡಿದ್ದಾರೆ. ಆದರೆ ಸ್ವಾತಂತ್ರ್ಯ ನಂತರದ ಬಂದ ಸರಕಾರಗಳು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಜೈನರ ತೀರ್ಥಕ್ಷೇತ್ರದ ವಿಚಾರದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುತ್ತಿವೆ. ಜೈನರ ಪುತಿರೋಧದ ನಡುವೆಯೂ ಜಾರ್ಖಂಡ್ ರಾಜ್ಯ ಸರಕಾರ ಈ ಪವಿತ್ರ ಸ್ಥಳವನ್ನು ಪುವಾಸಿತಾಣವನ್ನಾಗಿ ಘೋಷಿಸುವ ಮೂಲಕ ಅಪವಿತ್ರಗೊಳಿಸುವ ಹುನ್ನಾರಕ್ಕೆ ಮುಂದಾಗಿದೆ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಉದ್ದೇಶಿಸಿ ಮಾತನಾಡಿದ ಜೈನ ಧರ್ಮದ ಮುಖಂಡ ಡಾ. ಆಕಾಶ್ ರಾಜ್ ಜೈನ್ ಅವರು, ಇಡೀ ಜಗತ್ತಿಗೆ ಅ#ಹಿಂಸಾ ಮಾರ್ಗವನ್ನು ಹೇಳಿಕೊಟ್ಟ ಜೈನ ಧರ್ಮದ ಪವಿತ್ರವಾದ ಸ್ಥಳಕ್ಕೆ ಚ್ಯುತಿ ತರುವ ಕೆಲಸಕ್ಕೆ ಸರಕಾರ ಕೈಹಾಕಿದೆ. ಒಮ್ಮೆ ಪವಿತ್ರ ಸಮ್ಮೇದ ಶಿಖರ್ಜಿ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣವೆಂದು ಘೋಷಣೆ ಮಾಡಿದರೆ, ಅಲ್ಲಿ ಮ#ದ್ಯಸೇವನೆ, ಮಾಂಸಹಾರ ಹಾಗೂ ಇತರೆ ಚಟುವಟಿಕೆಗಳಿಗೆ ಅವಕಾಶ ನೀಡಿದಂತೆ ಆಗುತ್ತದೆ. ಇದು ಜೈನರ ಅಹಿಂ#ಸಾ ಭಾವನೆಗೆ ಧಕ್ಕೆ ತರುವ ಕೆಲಸ. ಮೊಘಲರ ಕಾಲದಲ್ಲೂ ಈ ಕ್ಷೇತ್ರದಲ್ಲಿ ಮಾಂಸಹಾರ ಸೇವನೆ ಅವಕಾಶ ಇರಲಿಲ್ಲ‌. ಹೀಗಾಗಿ ಇಂತಹ ಪವಿತ್ರ ಕ್ಷೇತ್ರ ವನ್ನು ಉಳಿಸಿಕೊಂಡು ಹೋಗುವುದು ಮುಖ್ಯವಾಗಿದೆ. ಆದ್ದರಿಂದ ಸರಕಾರ ಹೊರಡಿಸಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕೆಂದು ಅವರು ಆಗ್ರಹಿಸಿದರು.

Ads on article

Advertise in articles 1

advertising articles 2

Advertise under the article