ದ್ರೌಪದಿಗೆ, ಸೀತೆಗೆ ಸಹಾಯ ಮಾಡಿದಂತೆ, ನೀವು ನಮಗೆ ಸಹಾಯ ಮಾಡಿ: ಮೋದಿಗೆ ಮನವಿ ಮಾಡಿದ ನಟಿ ಕಂಗನಾ ರಣಾವತ್

ದ್ರೌಪದಿಗೆ, ಸೀತೆಗೆ ಸಹಾಯ ಮಾಡಿದಂತೆ, ನೀವು ನಮಗೆ ಸಹಾಯ ಮಾಡಿ: ಮೋದಿಗೆ ಮನವಿ ಮಾಡಿದ ನಟಿ ಕಂಗನಾ ರಣಾವತ್


ಮುಂಬೈ(Headlines Kannada): ಇತ್ತೀಚೆಗಷ್ಟೇ ಆ#ತ್ಮ##ತ್ಯೆ ಮಾಡಿಕೊಂಡ ನಟಿ ತುನಿಷಾ ಶರ್ಮಾ ಸಾ#ವಿನ ಕುರಿತು ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ನಟಿ ಕಂಗನಾ ರಣಾವತ್  ತಮ್ಮ ಅಸಮಾಧಾನ ಹೊರಹಾಕಿದ್ದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ. `ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಎಂದಿಗೂ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು ಗೌರವಾನ್ವಿತ ನಮ್ಮ ದೇಶದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಕೃಷ್ಣ ದ್ರೌಪದಿಗೆ, ಸೀತೆಗೆ ರಾಮ ಸಹಾಯ ಮಾಡಿದಂತೆ,  ನೀವು ನಮಗೆ ಸಹಾಯಮಾಡಬೇಕು. ನಾವು ನಿಮ್ಮಲ್ಲಿ ಒಪ್ಪಿಗೆ ಇಲ್ಲದ ಬ#ಹುಪತ್ನಿತ್ವ ವಿರುದ್ಧ ಬಲವಾದ ಕಾನೂನು ಮಾಡುತ್ತೀರಿ ಎಂದು ನಿರೀಕ್ಷೆ ಇಟ್ಟಿದ್ದೇವೆ. ಮಹಿಳೆಯರ ಮೇಲೆ ನಡೆಯುತ್ತಿರುವ ಆ#ಸಿಡ್ ದಾ#ಳಿ, ಮಹಿಳೆಯನ್ನು ಕೊಂ#ದು ತುಂ#ಡು ತುಂ#ಡುಗಳಾಗಿ ಕ#ತ್ತರಿಸುವುದು, ಇಂಥ ಕ#ಟುಕರಿಗೆ ತಕ್ಷಣ ಮ#ರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ 20 ವರ್ಷದ ತುನಿಷಾ ಶರ್ಮಾ ಶೂಟಿಂಗ್ ಸೆಟ್‌ನಲ್ಲೇ ಮೇಕಪ್ ರೂಮ್‌ನಲ್ಲಿ ನೇ#ಣು ಬಿ#ಗಿದುಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡಿದ್ದರು. ಸಾ#ವಿನ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. 

Ads on article

Advertise in articles 1

advertising articles 2

Advertise under the article