ಕುಂಜಿಬೆಟ್ಟು: ಮನೆಯ ಹಿಂಬಾಗಿಲು ಮುರಿದು 3.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕ#ಳವು

ಕುಂಜಿಬೆಟ್ಟು: ಮನೆಯ ಹಿಂಬಾಗಿಲು ಮುರಿದು 3.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕ#ಳವು


ಉಡುಪಿ (Headlines Kannada): ಮನೆಯ ಹಿಂಬಾಗಿಲನ್ನು ಮುರಿದು ಒಳಪ್ರವೇಶಿಸಿದ ಕ#ಳ್ಳರು‌ ಗೋದ್ರೇಜ್‌ ಲಾಕರ್‌ ನಲ್ಲಿಟ್ಟಿದ್ದ 3.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು‌ ಹೋಗಿರುವ ಘಟನೆ ಉಡುಪಿ ಕುಂಜಿಬೆಟ್ಟು ಎಂಬಲ್ಲಿ ನಡೆದಿದೆ.

ಕುಂಜಿಬೆಟ್ಟು‌ ನಿವಾಸಿ ೫೦ ವರ್ಷದ ವೈಷ್ಣವಿ ಆಚಾರ್ಯ ಎಂಬವರ ಮನೆಯಲ್ಲಿ ಕ#ಳ್ಳತನ ನಡೆದಿದೆ. ಇವರ‌ ಮನೆಗೆ ಡಿ.11ರ ರಾತ್ರಿಯಿಂದ ಡಿ.12ರ ಬೆಳಿಗ್ಗಿನ‌ ಮಧ್ಯಾವಧಿಯಲ್ಲಿ ಯಾರೋ ಕ#ಳ್ಳರು ನು#ಗ್ಗಿ, ಗೋದ್ರೇಜ್‌ ಲಾಕರ್‌ ನಲ್ಲಿಟ್ಡಿದ್ದ ಡೈಮಂಡ್‌ ಉಂಗುರ-1, 20 ಗ್ರಾಂ ತೂಕದ ಚಿನ್ನದ ಜುಮುಕಿ-2, 8 ಗ್ರಾಂ ತೂಕದ ಚಿನ್ನದ ಕಾಯಿನ್‌-1, ಬೆಳ್ಳಿಯ ತಟ್ಟೆಗಳು-2 ಹಾಗೂ ಚಿನ್ನದ ಲೇಪನ ಇರುವ ಆಭರಣಗಳನ್ನು ಕ#ಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3,48 ಲಕ್ಷ ರೂ.  ಆಗಿದೆ ಎಂದು ದೂರಿನಲ್ಲಿ‌ ತಿಳಿಸಲಾಗಿದೆ . ಈ ಬಗ್ಗೆ  ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article