ಪತ್ರಕರ್ತ ಸಿದ್ದಿಕ್ ಕಪ್ಪನ್'ಗೆ ಜಾಮೀನು ಮಂಜೂರು; 2 ವರ್ಷಗಳ ಬಳಿಕ ಜೈ#ಲಿನಿಂದ ಬಿಡುಗಡೆ

ಪತ್ರಕರ್ತ ಸಿದ್ದಿಕ್ ಕಪ್ಪನ್'ಗೆ ಜಾಮೀನು ಮಂಜೂರು; 2 ವರ್ಷಗಳ ಬಳಿಕ ಜೈ#ಲಿನಿಂದ ಬಿಡುಗಡೆ

 ಅಲಹಾಬಾದ್(Headlines Kannada): ಎರಡು ವರ್ಷಗಳ ಕಾಲ ಜೈ#ಲಿನಲ್ಲಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರಿಗೆ ಅಲಹಾಬಾದ್ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಅ#ಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಕಪ್ಪನ್ಮ ಅವರು ಮಲಯಾಳಂ ಸುದ್ದಿ ಪೋರ್ಟಲ್ ಅಝಿಮುಖಂ ವರದಿಗಾರ ಮತ್ತು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್(ಕೆಯುಡಬ್ಲ್ಯುಜೆ)ನ ದೆಹಲಿ ಘಟಕದ ಕಾರ್ಯದರ್ಶಿಯಾಗಿದ್ದು, ಈ ಹಿಂದಿನ ಕಾನೂನು#ಬಾಹಿರ ಚಟುವಟಿಕೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ ಮತ್ತೊಂದು ಪ್ರಕರಣ ಬಾಕಿ ಇದ್ದ ಕಾರಣ ಜೈ#ಲಿನಿಂದ ಬಿಡುಗಡೆಯಾಗಿರಲಿಲ್ಲ. ಈಗ 2 ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದ್ದು, 2 ವರ್ಷಗಳ ನಂತರ ಜೈ#ಲಿನಿಂದ ಬಿಡುಗಡೆಯಾಗುತ್ತಿದ್ದಾರೆ.

2020ರ ಅಕ್ಟೋಬರ್‌ನಲ್ಲಿ ದಲಿತ ಮಹಿಳೆಯ ಅ#ತ್ಯಾ#ಚಾ#ರ ಹಾಗು ಹ#ತ್ಯೆಯ ವರದಿ ಮಾಡಲು ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದಾಗ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಬಂಧಿಸಲಾಗಿತ್ತು.

Ads on article

Advertise in articles 1

advertising articles 2

Advertise under the article