
ಎಣ್ಣೆಹೊಳೆಯಲ್ಲಿ ಬೆಂ#ಕಿಗೆ ಆಹುತಿಯಾದ ಸ್ಕೂಟಿ: ಅದೃಷ್ಟವಶಾತ್ ತಪ್ಪಿದ ದು#ರಂತ
Thursday, December 22, 2022
ಕಾರ್ಕಳದ ಎಣ್ಣೆಹೊಳೆಯ ಸೇತುವೆ ಬಳಿ ಗುರುವಾರ ಸಂಜೆ ಸ್ಕೂಟಿಯೊಂದು ಬೆಂ#ಕಿಗೆ ಆಹುತಿಯಾದ ಬಗ್ಗೆ ವರದಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾ#ಣಹಾನಿ ಸಂಭವಿಸಿಲ್ಲ. ಕಾರ್ಕಳದ ವ್ಯಕ್ತಿಯೊಬ್ಬರಿಗೆ ಸೇರಿದ ಸ್ಕೂಟಿ ಇದಾಗಿದ್ದು, ಚಲಿಸುತಿದ್ದ ವೇಳೆ ಒಮ್ಮೇಲೆ ಆಫ್ ಆಗಿತ್ತು . ಆದರೆ ರಿಪೇರಿ ಮಾಡುವ ಸಂದರ್ಭದಲ್ಲಿ ಏಕಾಏಕಿ ಬೆಂ#ಕಿ ತಗುಲಿ ಸ್ಕೂಟಿ ಸು#ಟ್ಟು ಕರಕಲಾಗಿದೆ ಎನ್ನಲಾಗಿದೆ.