ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಹೇಳಿಕೆಗೆ ಆಕ್ರೋಶ; ಸಚಿವರ ನಾಲಿಗೆ ಕ#ತ್ತರಿಸಿ ತಂದವರಿಗೆ 10 ಕೋಟಿ ರೂ. ಬಹುಮಾನ: ಮಹಂತ ಪರಮಹಂಸ ದಾಸ್
ಲಕ್ನೋ: ರಾಮಾಯಣವನ್ನು ಆಧರಿಸಿ ರಚಿತವಾದ ಹಿಂದೂ ಧಾರ್ಮಿಕ ಗ್ರಂಥ ರಾಮಚರಿತಮಾನಸವು ಸಮಾಜದಲ್ಲಿ ದ್ವೇ#ಷವನ್ನು ಹರಡುತ್ತದೆ ಎಂದು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಹೇಳಿದ್ದು, ಈ ಹೇಳಿಕೆಯನ್ನು ವಿರೋಧಿಸಿರುವ ತಪಸ್ವಿ ಚಾವ್ನಿಯ ಮಹಂತ ಪರಮಹಂಸ ದಾಸ್, ಚಂದ್ರಶೇಖರ್ ನಾಲಿಗೆ ಕ#ತ್ತರಿಸಿ ತಂದವರಿಗೆ 10 ಕೋಟಿ ರೂ. ಬಹುಮಾನ ನೀಡಲಾಗುವುದು ಎಂದಿದ್ದಾರೆ.
ಬುಧವಾರ ಕಾರ್ಯಕ್ರಮವೊಂದರಲ್ಲಿ ಸಚಿವ ಚಂದ್ರಶೇಖರ್, ರಾಮಚರಿತಮಾಸ ಮತ್ತು ಮನುಸ್ಮೃತಿ ಸಮಾಜವನ್ನು ವಿಭಜಿಸುವ ಹಾಗು ದ್ವೇ#ಷವನ್ನು ಹರಡುವ ಗ್ರಂಥಗಳಾಗಿವೆ ಎಂದು ಹೇಳಿದ್ದರು.
ಸಚಿವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸರುವ ಅಯೋಧ್ಯೆ ಸ್ವಾಮೀಜಿ ದಾಸ್ ಅವರು, ಚಂದ್ರಶೇಖರ್ ಅವರ ನಾ#ಲಿಗೆ ತಂದವರಿಗೆ 10 ಕೋಟಿ ರೂಪಾಯಿ ಬಹುಮಾನ ಕೊಡಲಾಗುವುದು ಎಂದು ಘೋಷಿಸಿದ್ದಾರಲ್ಲದೇ, ಅಂತಹ ಸಚಿವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವ ಚಂದ್ರಶೇಖರ್ ಅವರ ಹೇಳಿಕೆಗೆ ರಾಮಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಯಾರೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.