72 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ನಟ ಸಂಜಯ್ ದತ್ ಹೆಸರಿಗೆ ಬರೆದು ಕೊನೆಯುಸಿರೆಳೆದ ವೃದ್ಧೆ! ತನಗೆ ಸಿಕ್ಕಿದ ಆಸ್ತಿಯನ್ನು ಸಂಜಯ್ ದತ್ ಮಾಡಿದ್ದೇನು ಗೊತ್ತೇ...?
ಮುಂಬೈ(Headlines Kannada): ಸಿನೆಮಾ ನಟ-ನಟಿಯರ ಬಗ್ಗೆ ಎಷ್ಟೊಂದು ದೊಡ್ಡ ಮಟ್ಟದಲ್ಲಿ ಅಭಿಮಾನ ಇರುತ್ತೆ ಎನ್ನುವುದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ. ತಾನು ಸಾ#ಯುವುದಕ್ಕೂ ಮುನ್ನ ವೃದ್ಧೆಯೋರ್ವಳು ತನ್ನ 72 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ನಟ ಸಂಜಯ್ ದತ್ ಹೆಸರಿಗೆ ಬರೆದಿದ್ದರು. ಈ ಘಟನೆ ನಡೆದಿದ್ದು 2018ರಲ್ಲಿ ಆಗಿದ್ದರೂ, ಅವರ ಕೆಲ ಅಭಿಮಾನಿಗಳು ಈ ಘಟನೆಯನ್ನು ಈಗ ಸೋಶಿಯಲ್ ಮೀಡಿಯಾದಲ್ಲಿ ನೆನಪಿಸಿಕೊಂಡಿದ್ದಾರೆ.
ಮುಂಬೈನಲ್ಲಿ ವಾಸವಾಗಿದ್ದ ನಿಶಾ ಪಾಟೀಲ್ ಹೆಸರಿನ 62 ವರ್ಷದ ವೃದ್ಧೆ ನಟ ಸಂಜಯ್ ದತ್ ಅವರ ಹುಚ್ಚು ಅಭಿಮಾನಿ. ಅವರು 2018ರ ಜನವರಿ 15ರಂದು ವಯೋಸಹಜ ಕಾಯಿಲೆಯಿಂದ ಸಾ#ವನ್ನಪ್ಪಿದ್ದರು. ಈ ವೇಳೆ ತಮ್ಮ ಆಸ್ತಿಯನ್ನು ಅವರು ಮಕ್ಕಳಿಗೆ ಬರೆದಿಟ್ಟಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ಆಗಿದ್ದೆ ಬೇರೆ.
ನಿಶಾ ಮೃ#ತಪಟ್ಟ ನಂತರದಲ್ಲಿ ಪೊಲೀಸರಿಗೆ ವಿಲ್ ವಿಚಾರ ಗೊತ್ತಾಗಿದ್ದು, ಹೀಗಾಗಿ, ಸಂಜಯ್ ದತ್ಗೆ ಕರೆ ಮಾಡಿ ಪೊಲೀಸರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬ್ಯಾಂಕ್ನಲ್ಲಿರುವ ಹಣ, ಜ್ಯುವೆಲರಿ, ಮನೆ ಸೇರಿ ಒಟ್ಟು 72 ಕೋಟಿ ಮೌಲ್ಯದ ಆಸ್ತಿಯನ್ನು ನಿಶಾ ಹೊಂದಿದ್ದರು. ಎಲ್ಲವೂ ಸಂಜಯ್ ದತ್ ಹೆಸರಿಗೆ ನಿಶಾ ಸಾವಿನ ಮುಂಚೆ ಬರೆದಿದ್ದರು.
ಈ ವಿಚಾರ ತಿಳಿಯುತ್ತಿದ್ದಂತೆಯೇ ಸಂಜಯ್ ದತ್ ಶಾಕ್ ಗೊಂಡಿದ್ದರು. ಅವರು ತನಗೆ ನೀಡಿದ ಈ ಹಣವನ್ನು ಮುಟ್ಟಿಲ್ಲ. ಬದಲಿಗೆ ನಿಶಾ ಪಾಟಿಲ್ ಅವರ ಮಕ್ಕಳ ಹೆಸರಿಗೆ ಇದನ್ನು ಸಂಜಯ್ ದತ್ ವರ್ಗಾವಣೆ ಮಾಡಿದ್ದರು. 2018ರಲ್ಲಿ ನಡೆದ ಈ ವಿಚಾರ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು.ಇದನ್ನು ಈಗ ನೆಟ್ಟಿಗರು ಮತ್ತೆ ಹಂಚಿಕೊಂಡಿದ್ದಾರೆ.