ಅಂಬಲಪಾಡಿ ಬೈಪಾಸ್ ನಲ್ಲಿ ಸರಣಿ ಅ#ಪಘಾತ: ಓರ್ವ ಮಹಿಳೆ ಗಂ#ಭೀರ, ಹಲವು ಮಂದಿಗೆ ಗಾಯ
Thursday, January 5, 2023
ಉಡುಪಿ (Headlines Kannada): ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಂಬಲಪಾಡಿ ಬೈಪಾಸ್ ಬಳಿ ಇಂದು ಮಧ್ಯಾಹ್ನ 3 ಕಾರು ಹಾಗೂ 1 ಲಾರಿ ನಡುವೆ ಸರಣಿ ಅ#ಪಘಾತ ನಡೆದ ಪರಿಣಾಮ ಓರ್ವ ಮಹಿಳೆ ಗಂ#ಭೀರವಾಗಿ ಗಾಯಗೊಂಡಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಇನ್ನೋವಾ ಕಾರು ಚಾಲಕ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಅದರ ಹಿಂದುಗಡೆಯಲ್ಲಿ ಬರುತ್ತಿದ್ದ ವಾಹನಗಳು ಪರಸ್ಪರ ಡಿ#ಕ್ಕಿ ಹೊಡೆದುಕೊಂಡಿವೆ. ಅಪಘಾತದಲ್ಲಿ ಇನ್ನೋವಾ ಕಾರು, ಮಹೀಂದ್ರಾ ಎಕ್ಸ್ ಯುವಿ 300 ಕಾರು, ಟಾಟಾ ನೆಕ್ಸಾನ್ ಕಾರು ಸಂಪೂರ್ಣ ಜಖಂ ಆಗಿದ್ದು, ಮಹೀಂದ್ರಾ ಎಕ್ಸ್ ಯುವಿ 300 ಕಾರಿನಲ್ಲಿದ್ದ ಕುಟುಂಬವೊಂದು ಅಪಘಾತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾ#ಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.