ರೀಲ್ಸ್'ಗಾಗಿ ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ದೀಪಕ್ ಗೌಡ ಬಂಧನ !
Saturday, March 4, 2023
ಹೊಸಪೇಟೆ: ರೀಲ್ಸ್'ಗಾಗಿ ಇತ್ತೀಚೆಗೆ ದೀಪಕ್ ಗೌಡ ಹಂಪಿಯ ಹೇಮಕೂಟ ಪರ್ವತ ಜೈನ ದೇಗುಲದ ಮೇಲೆ ನೃತ್ಯ ಮಾಡಿದ್ದ, ಅದಕ್ಕೆ ಪ್ರಕರಣ ದಾಖಲಾಗಿತ್ತು. ಈಗ ದೀಪಕ್ ಗೌಡನನ್ನು ಹಂಪಿ ಪೊಲೀಸರು ಬಂಧಿಸಿದ್ದಾರೆ.
ಹಂಪಿಯ ಹೇಮಕೂಟ ಪರ್ವತ ಜೈನ ದೇಗುಲದ ಮೇಲೆ ದೀಪಕ್ ಗೌಡ ಕುಣಿದು ಕುಪ್ಪಳಿಸುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪುರಾತನ ಸ್ಮಾರಕದ ಮಂಟಪಕ್ಕೆ ಹತ್ತುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾರಣ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಹಂಪಿ ಪೊಲೀಸರು ಕೇಸ್ ದಾಖಲಿಸಿಕೊಂಡು, ದೀಪಕ್ ಗೌಡನಿಗಾಗಿ ಹುಡುಕಾಟ ಆರಂಭಿಸಿದ್ದರು. ಕೊನೆಗೂ ಪೊಲೀಸರು ದೀಪಕ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.