ರಿಯಾದ್: ರಂಝಾನ್ ತಿಂಗಳ ಅರ್ಧಚಂದ್ರಾಕೃತಿ ಗೋಚರಿಸದೆ ಇರುವ ಕಾರಣ ಸೌದಿ ಅರೇಬಿಯಾದಲ್ಲಿ ಗುರುವಾರ(ಮಾರ್ಚ್ 23 ) ರಮದಾನ್'ನ ಮೊದಲ ದಿನವಾಗಿರುತ್ತದೆ ಎಂದು gulfnews ವರದಿ ಮಾಡಿದೆ.
ಸೌದಿ ಅರೇಬಿಯಾದ ತಮಿರ್ ವೀಕ್ಷಣಾಲಯದಲ್ಲಿ ಮಂಗಳವಾರ ರಮದಾನ್ ತಿಂಗಳ ಅರ್ಧಚಂದ್ರಾಕೃತಿ ಕಾಣದೆ ಇರುವುದರಿಂದ ಗುರುವಾರ ರಮದಾನ್'ನ ಮೊದಲ ದಿನವಾಗಿರುತ್ತದೆ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ನಿರ್ಧಾರವನ್ನು ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ಇನ್ನೂ ಅಧಿಕೃತವಾಗಿ ದೃಢೀಕರಿಸಬೇಕಾಗಿದೆ ಎಂದು ಹೇಳಲಾಗಿದೆ.
