ನನ್ನ ಬೆಂಬಲ ಪಕ್ಷಕ್ಕಲ್ಲ, ವ್ಯಕ್ತಿಗೆ ಮಾತ್ರ; ಈ ಬಾರಿ ಬೊಮ್ಮಾಯಿಗೆ ನನ್ನ ಬೆಂಬಲ: ನಟ ಕಿಚ್ಚ ಸುದೀಪ್
ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರನ್ನು ಸಣ್ಣ ವಯಸ್ಸಿನಿಂದ ನೋಡಿಕೊಂಡು ಬಂದಿದ್ದು, ಅವರೊಂದಿಗೆ ನನ್ನ ಆತ್ಮೀಯ ಸಂಬಂಧವಿದೆ. ಈ ಕಾರಣದಿಂದ ನಾನು ಈ ಬಾರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಕೊಡಲು ಇಚ್ಛಿಸಿದ್ದೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಮುಖಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮುಖದಲ್ಲಿ ಕರೆದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಲ್ಲ, ಬಿಜೆಪಿ ಪಕ್ಷ ಅಂತ ಬಂದಿಲ್ಲ, ವ್ಯಕ್ತಿ ಅಂಥ ಈ ಬೆಂಬಲ ನೀಡುತ್ತಿದ್ದೇನೆ ಎಂದರು.
ಸಣ್ಣಗಿನಿಂದ ಈ ವರಗೆ ಕಷ್ಟದ ದಿನಗಳಲ್ಲಿ ನನ್ನ ಜೊತೆಗೆ ನಿಂತಿದ್ದು ಸಿಎಂ ಬೊಮ್ಮಾಯಿಯವರು. ನಾನು ಚಿಕ್ಕವಯಸ್ಸಿನಿಂದ ಬೊಮ್ಮಾಯಿಯವರನ್ನು ನೋಡಿಕೊಂಡು ಬಂದಿದ್ದು, ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನಪರ ನಿಂತಿದ್ದರು. ಅಂಥಹವರು ನನ್ನ ಮಾಮ ಸಿಎಂ ಬೊಮ್ಮಾಯಿಯಾಗಿದ್ದು, ನಾನು ಅವರ ಪರವಾಗಿ ನಿಲ್ಲಲು ಬಂದೆ ಎಂದು ಸುದೀಪ್ ಹೇಳಿದರು.
ಬೇರೆ ಪಕ್ಷದಲ್ಲಿ ನನಗೆ ಸಹಾಯ, ಸಹಕಾರ ನೀಡಿದವರಿದ್ದರೆ ಅವರ ಪರವೂ ನಾನು ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ ಸುದೀಪ್, ನಾನು ಬಿಜೆಪಿಗೆ ಸೇರ್ಪಡೆ ಆಗುತ್ತಿಲ್ಲ, ರಾಜಕೀಯಕ್ಕೂ ಬರುತ್ತಿಲ್ಲ ಎಂದರು.
ನಾನು ಚಿತ್ರರಂಗ ಪ್ರವೇಶಿಸುವಾಗ ಗಾಡ್ ಫಾದರ್ ಅಂತ ಯಾರು ಇರಲಿಲ್ಲ. ಆ ಟೈಮ್ಲ್ಲಿ ಅವರು ನನ್ನ ಪರ ಇದ್ದರು. ಹೀಗಾಗಿ ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ. ಕೆಲ ಸ್ನೇಹಿತರು ಇದ್ದಾರೆ ನಾನು ಅವರ ಪರ ನಿಲ್ಲುತ್ತೇನೆ ಎಂದರು.
ಇದು ನನ್ನ ವೈಯಕ್ತಿಕ ಪತ್ರಿಕಾಗೋಷ್ಠಿ. ಬಿಜೆಪಿ ಪಕ್ಷದ ಪತ್ರಿಕಾಗೋಷ್ಠಿಯಾಗಿದ್ದರೆ ಪಕ್ಷದ ಕಚೇರಿಯಲ್ಲಿ ಕರೆಯುತ್ತಿದ್ದೆವು. ಸುದೀಪ್ ನನ್ನ ಪರವಾಗಿ ಇಲ್ಲಿಗೆ ಬಂದಿದ್ದಾರೆ. ನಾನು ಎಲ್ಲಿ ಪ್ರಚಾರ ಮಾಡಬೇಕು ಏನು ಹೇಳುತ್ತೇವೆಯೋ ಅಲ್ಲಿಗೆ ಬಂದು ಸುದೀಪ್ ಅವರು ಪ್ರಚಾರ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಹೇಳಿದರು.