ನಾನು‌ ವ್ಯಾಪಾರಸ್ಥನಲ್ಲ...‌ನನ್ನ ಸ್ವಾರ್ಥಕ್ಕೆ ಏನು ಮಾಡಿಕೊಂಡಿಲ್ಲ...ಜನರ ಸೇವೆಗಾಗಿ ರಾಜಕೀಯಕ್ಕೆ ಬಂದವನು: ವಿನಯ್ ಕುಮಾರ್ ಸೊರಕೆ

ನಾನು‌ ವ್ಯಾಪಾರಸ್ಥನಲ್ಲ...‌ನನ್ನ ಸ್ವಾರ್ಥಕ್ಕೆ ಏನು ಮಾಡಿಕೊಂಡಿಲ್ಲ...ಜನರ ಸೇವೆಗಾಗಿ ರಾಜಕೀಯಕ್ಕೆ ಬಂದವನು: ವಿನಯ್ ಕುಮಾರ್ ಸೊರಕೆ

ಉಡುಪಿ: ಕಳೆದ ಚುನಾವಣೆಯಲ್ಲಿ ನನ್ನ ಬಗ್ಗೆ ಬಹಳಷ್ಟು ಅಪ ಪ್ರಚಾರ ಮಾಡಿ ಚುನಾವಣೆಯಲ್ಲಿ ಸೋಲಾಯ್ತು .ಈ ಚುನಾವಣೆಯಲ್ಲಿ ಕೂಡಾ ನನ್ನ ಬಗ್ಗೆ ಅಪ ಪ್ರಚಾರ ಮತ್ತೆ ಶುರುವಾಗಿದೆ.‌ನನ್ನ‌ ಬಗ್ಗೆ  ಮತದಾರರು ತಿಳಿದುಕೊಂಡಿದ್ದಾರೆ ಅನ್ನೋ‌ ನಂಬಿಕೆ ನನಗಿದೆ. ಅಪಪ್ರಚಾರ ಮಾಡುವವರಿಗೆ ಈ‌ ಬಾರಿಯ ಚುನಾವಣೆಯಲ್ಲಿ ಜನ ಸರಿಯಾದ ಪಾಠ ಕಲಿಸ್ತಾರೆ ಎಂದು ಕಾಪು‌‌ ಚುನಾವಣಾ ಅಭ್ಯರ್ಥಿ ‌ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.



ಮುದ್ರಾಡಿ ಬಿಲ್ಲವ ಸಮಾಜದ  ಸಮಾಜ‌ಸೇವಾ ಸಂಘಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ನಾನು ವ್ಯಾಪಾರಸ್ಥನಲ್ಲ‌. ಸುಮಾರು 40 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಮಾಡ್ತಾ ಬಂದಿದೀನಿ..ಜನಸೇವೆಗಾಗಿ ನನ್ನ‌ ಜೀವನವನ್ನು ಮುಡಿಪಾಗಿಟ್ಟಿದ್ದೇನೆ.‌ ಕಾಪು ಕ್ಷೇತ್ರದಲ್ಲಿ ಇತಿಹಾಸ ಕಂಡು ಕೇಳರಿಯದ ಅಭಿವೃದ್ಧಿ ಯನ್ನು ಮಾಡಿದೀನಿ ಅನ್ನೋ‌ ಖುಷಿ‌ ಇದೆ. ಈ ಬಾರಿ ಇನ್ನೊಮ್ಮೆ ಅವಕಾಶ ಕೊಟ್ಟರೆ ಕಾಪು ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ನಿಸ್ಸಂದೇಹವಾಗಿ ಮಾಡ್ತಿನಿ ಅನ್ನೋ ವಾಗ್ದಾನ ಮಾಡ್ತಿನಿ ಎಂದು ಸೊರಕೆ ಹೇಳಿದ್ದಾರೆ.

ನನ್ನ ಜೀವನ ತೆರೆದ ಪುಸ್ತಕ..‌ ನಿಮಗೆಲ್ಲ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ.ಕೋಟಿ ಚೆನ್ನಯ್ಯ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಗಳು‌ ನಮ್ಮ ಸಮಾಜದ ಮಹಾನ್ ಶಕ್ತಿ..‌ಇತರ ಎಲ್ಲಾ ಸಮುದಾಯದಕ್ಕೆ  ಆದರ್ಶಪ್ರಾಯವಾದ ಚಿಂತನೆಯನ್ನು ಬಿತ್ತಿದವರು ನಾರಾಯಣ ಗುರುಗಳು..‌ಈ‌ ಭಾಗದ  ಅಭಿವ್ರದ್ಧಿಗಾಗಿ ಸಾಕಷ್ಟು ಅನುದಾನವನ್ನು ಶಾಸಕನಾಗಿದ್ದ ಅವಧಿಯಲ್ಲಿ‌ ಒದಗಿಸಿಕೊಟ್ಟ ತ್ರಪ್ತಿ ನನಗಿದೆ. ಇನ್ನಷ್ಟು ಕೆಲಸವನ್ನು ಮಾಡಲು‌ ಶಕ್ತಿಯನ್ನು‌ ನೀವು ಮನ್ ತುಂಬಬೇಕಿದೆ ಅಂತಾ ಸೊರಕೆ ಹೇಳಿದ್ದಾರೆ.

ಬಿಲ್ಲವ ಮುಖಂಡರಾದ ಸುರೇಶ ಸುವರ್ಣ,ನವೀನ್ ಚಂದ್ರ ಸುವರ್ಣ,ಶಿವಾಜಿ ಸುವರ್ಣ,ಆನಂದ ಪೂಜಾರಿ, ಸುಧೀರ್,ಶೇಖರ ಶಾಂತಿ, ರೋಹನ್ ಕುಮಾರ್, ಕ್ರಷ್ಣ ಪೂಜಾರಿ, ಗುಣಕರ ಪೂಜಾರಿ,, ರವಿರಾಜ್, ಡೇವಿಡ್,  ಅಜಿತ್ ಪೂಜಾರಿ,  ಸುಜಾತ  ಸುವರ್ಣ, ಜಯಶ್ರೀ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article