SSLC ಮರು ಮೌಲ್ಯಮಾಪನದಲ್ಲಿ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆಯ ಹಾಫಿಲ್ ಮುಸದ್ದಿಕ್ ರಂಝಿ 95.84% ಅಂಕ

SSLC ಮರು ಮೌಲ್ಯಮಾಪನದಲ್ಲಿ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆಯ ಹಾಫಿಲ್ ಮುಸದ್ದಿಕ್ ರಂಝಿ 95.84% ಅಂಕ

ಮೂಳೂರು: ಇಲ್ಲಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಹೈಸ್ಕೂಲ್ ನ SSLC 2022-23 ಸಾಲಿನ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ ಹಾಫಿಲ್ ಮುಸದ್ದಿಕ್ ರಂಝಿ ಮರುಮೌಲ್ಯ ಮಾಪನಕ್ಕೆ ಹಾಕಿದ್ದು, ಇದರಲ್ಲಿ 4 ಅಂಕ  ಪಡೆದು ಒಟ್ಟು ಅಂಕ 599 (ಶೇಕಡಾ 95.84% ) ದೊಂದಿಗೆ ಶಾಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅಲ್ ಇಹ್ಸಾನ್ ಹಿಫ್ಲ್ ಕುರಾನ್ ಕಾಲೇಜಿನಲ್ಲಿ ಪವಿತ್ರ ಕುರಾನ್ ಸಂಪೂರ್ಣ ಕಂಠಪಾಠಮಾಡಿದ್ದು, ಇದೀಗ ಉನ್ನತ ವ್ಯಾಸಂಗಕ್ಕೆ ಕೇರಳ ಕಲ್ಲಿಕೋಟೆಯಲ್ಲಿರುವ Dr.AP ಹಕೀಮ್ ಅಝ್ಹರಿ ಉಸ್ತಾದರ ನೇತೃತ್ವದ ಮರ್ಕಝ್ ಗಾರ್ಡನ್ ಅದೀನ ಬೈತುಲ್ ಇಝ್ಝದಲ್ಲಿ +1 ಸೈನ್ಸ್ ನೊಂದಿಗೆ ದಅವಾ ವಿಭಾಗದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಮುಸದ್ದಿಕ್ ರಂಝಿ ಅಲ್ ಇಹ್ಸಾನ್ ವಿದ್ಯಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗು ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ವೈಬಿಸಿ ಬಶೀರ್ ಅಲಿಯವರ ಪುತ್ರರಾಗಿದ್ದಾರೆ.

Ads on article

Advertise in articles 1

advertising articles 2

Advertise under the article