ಯುಎಇಯ ವಿವಿಧ ಕಾರಾಗೃಹಗಳಲ್ಲಿರುವ 900 ಕೈದಿಗಳ ಬಿಡುಗಡೆಗೆ ₹2.25 ಕೋಟಿ ದಾನ ಮಾಡಿದ ಭಾರತದ ಉದ್ಯಮಿ ಫಿರೋಜ್ ಮರ್ಚೆಂಟ್!

ಯುಎಇಯ ವಿವಿಧ ಕಾರಾಗೃಹಗಳಲ್ಲಿರುವ 900 ಕೈದಿಗಳ ಬಿಡುಗಡೆಗೆ ₹2.25 ಕೋಟಿ ದಾನ ಮಾಡಿದ ಭಾರತದ ಉದ್ಯಮಿ ಫಿರೋಜ್ ಮರ್ಚೆಂಟ್!

ಹೊಸದಿಲ್ಲಿ: ಭಾರತದ ಪರೋಪಕಾರಿ ಉದ್ಯಮಿ ಎಂದೇ ಖ್ಯಾತರಾಗಿರುವ ಫಿರೋಜ್ ಮರ್ಚೆಂಟ್ ಅವರ ವಿಶಿಷ್ಟ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ಈ ಬಾರಿ ಯುಎಇಯ ವಿವಿಧ ಕಾರಾಗೃಹಗಳಲ್ಲಿ ಬಂಧಿಗಳಾಗಿರುವ 900 ಕೈದಿಗಳ ಬಿಡುಗಡೆಗೆ 1 ಮಿಲಿಯನ್ ದಿರ್ಹಾಮ್ಸ್ (ಅಂದಾಜು 2.25 ಕೋಟಿ ರೂ) ದಾನ ಮಾಡಿದ್ದಾರೆ. 

ಕುಟುಂಬಕ್ಕಾಗಿ ದುಡಿಯಲು ವಿದೇಶಕ್ಕೆ ಹೋಗಿ, ಅಲ್ಲಿ ಯಾವುದೇ ತಪ್ಪಿನಿಂದ ಜೈಲು ಪಾಲಾದ ಬಡಪಾಯಿಗಳನ್ನು ಮತ್ತೆ ಅವರ ಕುಟುಂಬದವರ ಜತೆ ಸೇರಿಸುವ ಮಹತ್ಕಾರ್ಯದ ಮೂಲಕ ಅವರು ಗಮನ ಸೆಳೆದಿದ್ದಾರೆ.

2024ರ ಆರಂಭದ ಈ ಎರಡು ತಿಂಗಳಲ್ಲಿ ಫಿರೋಜ್ ಮರ್ಚೆಂಟ್ ಅವರು ಗಲ್ಫ್ ದೇಶವಾದ ಯುಎಇಯ ವಿವಿಧ ಕಾರಾಗೃಹಗಳಲ್ಲಿ ಬಂಧಿಗಳಾಗಿರುವ 900 ಕೈದಿಗಳ ಬಿಡುಗಡೆಗೆ 1 ಮಿಲಿಯನ್ ದಿರ್ಹಾಮ್ಸ್ (ಅಂದಾಜು 2.25 ಕೋಟಿ ರೂ) ದಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ವರ್ಷ 3 ಸಾವಿರ ಕೈದಿಗಳನ್ನು ಜೈಲಿನಿಂದ ಹೊರಗೆ ಕರೆತರುವ ಗುರಿ ಹೊಂದಿದ್ದಾರೆ.

66 ವರ್ಷದ ಫಿರೋಜ್ ಮರ್ಚೆಂಟ್ ಅವರು ಪ್ಯೂರ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಾಗಿದ್ದಾರೆ. ದುಬೈನಲ್ಲಿ ನೆಲೆಸಿರುವ ಅವರು, ಕೈದಿಗಳ ಬಿಡುಗಡೆಗೆ ಅಗತ್ಯವಾದ ಹಣಕಾಸಿನ ನೆರವಿಗಾಗಿ ಯುಎಇ ಅಧಿಕಾರಿಗಳಿಗೆ 1 ಮಿಲಿಯನ್ ದಿರ್ಹಾಮ್ಸ್ ನೀಡಿದ್ದಾರೆ.

ಇದು ರಂಜಾನ್‌ಗೂ ಮುನ್ನ ನೀಡಿರುವ ಮಾನವೀಯತೆ, ನಮ್ರತೆ, ಕ್ಷಮಾದಾನ ಮತ್ತು ಕರುಣೆಯ ಸಂದೇಶವಾಗಿದೆ ಎಂದು ಫಿರೋಹ್ ಮರ್ಚೆಂಟ್ ಅವರ ಕಚೇರಿ ತಿಳಿಸಿದೆ.

"ದುಬೈ ಮೂಲದ ಭಾರತೀಯ ಉದ್ಯಮಿ ಹಾಗೂ ಪರೋಪಕಾರಿ, ಪ್ಯೂರ್ ಗೋಲ್ಡ್‌ನ ಫಿರೋಜ್ ಮರ್ಚೆಂಟ್ ಅವರು ಅರೇಬಿಯನ್ ದೇಶದ ವಿವಿಧ ಭಾಗಗಳಲ್ಲಿನ 900 ಕೈದಿಗಳ ಬಿಡುಗಡೆ ಸಾಧ್ಯವಾಗುವಂತೆ ಸುಮಾರು 2.25 ಕೋಟಿ ರೂ (ಎಇಡಿ 1 ಮಿಲಿಯನ್) ಹಣ ದೇಣಿಗೆ ನೀಡಿದ್ದಾರೆ" ಎಂದು ಅವರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

'ದಿ ಫರ್ಗಾಟನ್ ಸೊಸೈಟಿ' ಯೋಜನೆ ಮೂಲಕ ಹೆಸರಾಗಿರುವ ಮರ್ಚೆಂಟ್, 900 ಕೈದಿಗಳ ಬಿಡುಗಡೆಗೆ ಈಗಾಗಲೇ ನೆರವಾಗಿದ್ದಾರೆ. ಇದರಲ್ಲಿ ಅಜ್ಮಾನ್‌ನ 450, ಫುಜೈರಾಹ್‌ದ 170 ಕೈದಿಗಳು, ದುಬೈನ 121, ಉಮ್ ಅಲ್ ಕುವೈನ್‌ನ 69 ಮತ್ತು ರಾಸ್ ಅಲ್ ಖೈಮಾಹ್‌ನ 28 ಕೈದಿಗಳು ಸೇರಿದ್ದಾರೆ ಎಂದು ಮಾಗಲ್ಫ್ ಸುದ್ದಿ ವೆಬ್‌ಸೈಟ್ ತಿಳಿಸಿದೆ.

'ದಿ ಫರ್ಗಾಟನ್ ಸೊಸೈಟಿ'ಯು 2008ರಲ್ಲಿ ಸ್ಥಾಪನೆಯಾಗಿದ್ದು, ಈ ವರ್ಷಗಳಲ್ಲಿ 2 ಸಾವಿರಕ್ಕೂ ಅಧಿಕ ಕೈದಿಗಳ ಬಿಡುಗಡೆಗೆ ಸಹಾಯ ಮಾಡಿದೆ. ಬಿಡುಗಡೆಯಾದ ಕೈದಿಗಳು ಮಾಡಿರುವ ಸಾಲವನ್ನೂ ತೀರಿಸಿ, ಅವರು ತಮ್ಮ ಊರುಗಳಿಗೆ ವಾಪಸ್ ಹೋಗಲು ಅಗತ್ಯವಾದ ವಿಮಾನ ಟಿಕೆಟ್ ದರವನ್ನು ಕೂಡ ಮರ್ಚೆಂಟ್ ಒದಗಿಸುತ್ತಿದ್ದಾರೆ. ಈ ವರ್ಷ 3 ಸಾವಿರಕ್ಕೂ ಹೆಚ್ಚಿನ ಕೈದಿಗಳು ಬಂಧ ಮುಕ್ತಗೊಳ್ಳಲು ಸಹಾಯ ಮಾಡುವುದು ಅವರ ಗುರಿ ಎಂದು ವರದಿ ಹೇಳಿದೆ.

Ads on article

Advertise in articles 1

advertising articles 2

Advertise under the article