ಬೆಂಗಳೂರು ಬಾಂಬ್ ಸ್ಫೋಟ ಟ್ರೇಲರ್‌ ಅಷ್ಟೆ, ಇನ್ನೂ ದೊಡ್ಡ ದೊಡ್ಡ ಗಂಡಾಂತರಗಳು ಕಾದಿವೆ: ಸಂಸದ ಪ್ರತಾಪ ಸಿಂಹ

ಬೆಂಗಳೂರು ಬಾಂಬ್ ಸ್ಫೋಟ ಟ್ರೇಲರ್‌ ಅಷ್ಟೆ, ಇನ್ನೂ ದೊಡ್ಡ ದೊಡ್ಡ ಗಂಡಾಂತರಗಳು ಕಾದಿವೆ: ಸಂಸದ ಪ್ರತಾಪ ಸಿಂಹ

ಮೈಸೂರು: ಬೆಂಗಳೂರಿನಲ್ಲಿ ನಡೆದಿರುವ ಬಾಂಬ್‌ ಸ್ಫೋಟ ಪ್ರಕರಣ ಟ್ರೇಲರ್‌ ಅಷ್ಟೆ. ಮುಂದೆ ರಾಜ್ಯದಲ್ಲಿ ಇನ್ನೂ ದೊಡ್ಡ ದೊಡ್ಡ ಗಂಡಾಂತರಗಳು ಕಾದಿವೆ ಎಂದು ಮೈಸೂರು–ಕೊಡಗು ಬಿಜೆಪಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. 

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ನಾನು 2023ರ ವಿಧಾನಸಭಾ ಚುನಾವಣೆ ಪ್ರಚಾರದಲ್ಲೇ ಹೇಳಿದ್ದೆ. ನೀವು ಕಾಂಗ್ರೆಸ್‌ಗೆ ಓಟ್ ಹಾಕಿದ್ರೆ, ತಾಲಿಬಾನಿ ಸರ್ಕಾರ ಬರುತ್ತೆ ಎಂದಿದ್ದೆ. ಇವತ್ತು ತಾಲಿಬಾನಿ ಸರ್ಕಾರ ನಡೀತಿದೆ ಎಂಬುದಕ್ಕೆ ಬಹಳಷ್ಟು ಘಟನೆಗಳು ಸಾಕ್ಷಿ ಆಗಿದೆ. ವಿಧಾನಸೌಧದ ಒಳಗೆ ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಮೊಳಗಿದೆ ಅಂದ್ರೆ ಯಾರು ಅಧಿಕಾರ ಮಾಡ್ತಿದ್ದಾರೆ ಅನ್ನೋದು ಸ್ಪಷ್ಟ ಆಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರೆದರೆ ವಿಧಾನಸೌಧದ ಗೋಪುರದ ಮೇಲೆ ಮೈಕ್ ಇಟ್ಟು ಆಜಾನ್ ಕೂಗಿದ್ರೂ ಆಶ್ಚರ್ಯ ಪಡಬೇಡಿ ಎಂದ ಪ್ರತಾಪ್ ಸಿಂಹ, ಬಾಂಬ್ ಬ್ಲಾಸ್ಟ್‌ಗಳು ಶುರುವಾಗಿದ್ದೇ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ. ಹತ್ತು ವರ್ಷಗಳ ಕಾಲ ಸರಣಿ ಬಾಂಬ್ ಬ್ಲಾಸ್ಟ್‌ಗಳು ದೇಶದಲ್ಲಿ ನಡೆದಿದ್ದವು. ಚಿನ್ನಸ್ವಾಮಿ ಸ್ಟೇಡಿಂ, ಲಿಂಬಿಣಿ ಗಾರ್ಡನ್, ಜರ್ಮನ್ ಬೇಕರಿ, ಪೂಣೆ, ಮುಂಬೈ, ಡೆಲ್ಲಿ,ಸೂರತ್ ಹೀಗೆ ದೇಶಾದ್ಯಂತ ಸರಣಿ ಬಾಂಬ್ ಬ್ಲಾಸ್ಟ್‌ಗಳು ನಡೆಯುತ್ತಿದ್ದವು ಎಂದು ಹೇಳಿದರು.

ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಹಾಗಾಗಿ ಬಾಂಬ್ ಬ್ಲಾಸ್ಟ್‌ಗಳು ಪ್ರಾರಂಭವಾಗಿದೆ ಎಂದ ಪ್ರತಾಪ್ ಸಿಂಹ, ಇದು ಟ್ರೈಲರ್ ಮಾತ್ರ, ಮುಂದೆ ಇನ್ನೂ ದುರ್ಘಟನೆಗಳು ಕಾದಿವೆ ಎಂದ ಅವರು, ಆದಷ್ಟು ಬೇಗ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನವನ್ನು ಬಿಜೆಪಿ ಜೆಡಿಎಸ್ ಮೈತ್ರಿಕೂಟಕ್ಕೆ ಕೊಟ್ಟು ಗೆಲ್ಲಿಸಿ ಕೊಡಿ. ಆ ಮೂಲಕ ಈ ಸರ್ಕಾರ ತೊಲಗಲು ಅವಕಾಶ ಮಾಡಿಕೊಟ್ರೆ ಕರ್ನಾಟಕ ಉಳಿಯುತ್ತೆ, ಇಲ್ಲದಿದ್ರೆ ಗಂಡಾಂತರ ಕಾದಿದೆ‌ ಎಂದು ಎಚ್ಚರಿಕೆ ನೀಡಿದರು.

ಒಸಾಮಾಬಿನ್, ಮುಲ್ಲಾ ಉಮರ್‌ಜಾ ಅಂತಹವರು ಅಧಿಕಾರ ಮಾಡುವಾಗ ಬಾಂಬ್ ಹಾಕುವವರಿಗೆ ರಕ್ಷಣೆ ಕೊಡುತ್ತಾರೆ, ಹಿಡಿಯೋ ಕೆಲಸ ಮಾಡಲ್ಲ ಎಂದ ಪ್ರತಾಪ್ ಸಿಂಹ, ಇಷ್ಟೆಲ್ಲ ಆದ್ರೂ ಎಫ‌ಎಸ್‌ಎಲ್ ರಿಪೋರ್ಟ್ ಸೋಷಿಯಲ್ ಮೀಡಿಯಾದಲ್ಲಿ ತಿರುಚಿದ್ದಾರೆ ಅಂತ ಸಮರ್ಥಿಸಿಕೊಳ್ಳುವ ಅಗತ್ಯ ಏನಿದೆ‌? ಸಿದ್ದರಾಮಯ್ಯ ಅವರೇ ನೀವು ಅವರ ಕೈ ಕಡಿದರೂ ಅವರು ನಿಮಗೆ ಮತ ಹಾಕೋದು. ಮತ್ಯಾಕೆ ನೀವು ರಕ್ಷಣೆ ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು.

Ads on article

Advertise in articles 1

advertising articles 2

Advertise under the article