SSLC ಫಲಿತಾಂಶ; ಕಣ್ಣೂರು ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ: ಅಭಿನಂದಿಸಿದ ಅಬ್ದುಲ್ ಮಜೀದ್ ಸಿತಾರ್

ಮಂಗಳೂರು: ಕಣ್ಣೂರು ಇಂಗ್ಲಿಷ್ ಮೀಡಿಯಂ ಶಾಲೆ ಈ ಬಾರಿಯ SSLC ಪರೀಕ್ಷೆಯಲ್ಲಿ ಸತತ 7ನೇ ವರ್ಷವೂ ಶೇ.100ರ ಫಲಿತಾಂಶ ಸಾಧಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 

45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 3 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 33 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ಈ ಸಾಧನೆಯಲ್ಲಿ ಅಗ್ರಸ್ಥಾನ ಪಡೆದಿರುವುದು ಜೈನಾಬಾ ರಿಫಾ. 563 ಅಂಕಗಳೊಂದಿಗೆ 90.08% ಗಳಿಸಿ ಶಾಲೆಯ ಟಾಪರ್ ಆಗಿ ಹೊರಹೊಮ್ಮಿರುವ ಜೈನಾಬಾ, ಕಠಿಣ ಪರಿಶ್ರಮ ಮತ್ತು ಗುರಿಯೆಡೆಗೆ ಇರುವ ದೃಢನಿಶ್ಚಯದಿಂದ ಈ ಯಶಸ್ಸು ಸಾಧಿಸಿದ್ದಾರೆ. ಶಾಲಾ ಮಕ್ಕಳ ಸಾಧನೆಯನ್ನು ಕಣ್ಣೂರು ಮಹಿಳಾ ಪಿಯು ಕಾಲೇಜು ಹಾಗು ಹೈಸ್ಕೂಲಿನ ಕಾರ್ಯದರ್ಶಿ, ಡಾ.A.P.J.ಅಬ್ದುಲ್ ಕಲಾಂ ಫೌಂಡೇಶನ್ ನ ಅಧ್ಯಕ್ಷರಾದ  ಅಬ್ದುಲ್ ಮಜೀದ್ ಸಿತಾರ್ ಅಭಿನಂದಿಸಿದ್ದಾರೆ.