ವಿಫಲತೆಯನ್ನು ಅನುಭವ ಎಂದು ಭಾವಿಸಿ ಹೊರತು ದೃತಿಗೆಡಬೇಡಿ: ಬದ್ರಿಯಾ ಕಾಲೇಜ್ ವಾರ್ಷಿಕ ಎನ್ಎಸ್ಎಸ್ ಶಿಬಿರದಲ್ಲಿ ಎ.ಕೆ.ಅನ್ಸಾಫ್

ಮಂಗಳೂರು: ಇಲ್ಲಿನ ಬೆಂಗರೆ ಸರಕಾರಿ ಶಾಲೆಯಲ್ಲಿ ಮಂಗಳೂರು ವಿಶ್ವವಿಧ್ಯಾನಿಲಯ ಬದ್ರಿಯಾ ಕಾಲೇಜ್ ವಾರ್ಷಿಕ ಎನ್ ಎಸ್ ಎಸ್  ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು.


ಎನ್ ಎಸ್ ಎಸ್  ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ ಸದಸ್ಯ, ಯುವ ಚಿಂತಕರಾದ ಎ.ಕೆ.ಅನ್ಸಾಫ್ ಅವರು, "ವಿಫಲತೆಯನ್ನು ಅನುಭವ ಎಂದು ಭಾವಿಸಬೇಕು ಹೊರತು ದೃತಿಗೆಡಬಾರದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಪುಲ ಅವಕಾಶವಿದೆ. ವಿದ್ಯಾರ್ಥಿಗಳು ತಂತ್ರಜ್ಙಾನಗಳನ್ನು , ಅತ್ಯಾಧುನಿಕ ಅವಕಾಶಗಳನ್ನು ಸಕಾರಾತ್ಮಕವಾಗಿ ಬಳಸಿ ಜ್ಙಾನಾರ್ಜನೆಗೆ ಒತ್ತು ಕೊಡಬೇಕು. ಎನ್ ಎಸ್ ಎಸ್ ಶಿಬಿರ ದೇಶ ಸೇವೆಯ ಕಿಚ್ಚನ್ನು ಹಚ್ಚುವ ಶಿಬಿರವಾಗಿದೆ. ಈ ಕಿಚ್ಟನ್ನು ತನ್ನ ಜೀವನಪೂರ್ತಿ ಆರಲು ಬಿಡದೇ ಆ ಮೂಲಕ ಮುಂದಿನ ದಿನಮಾನಗಳಲ್ಲಿ ದೇಶ ಸೇವೆಯನ್ನು ಮಾಡಬೇಕು ಎಂದರು. 

ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನನಗೆ ಅತೀವ ಸಂತಸ ತಂದಿದೆ. ಮುಂದಿನ ದಿನಮಾನಗಳಲ್ಲಿ ವಿದ್ಯಾರ್ಥಿ ಮಿತ್ರರಿಗೆ ಏನೇ ಸಂಕಷ್ಟಗಳಿದ್ದರೂ ಹೆಗಲಾಗಲು ಪ್ರಾಮಾಣಿಕ ಪ್ರಯತ್ನವನ್ನೂ ಮಾಡುವೆ ಎಂದು ಅನ್ಸಾಫ್ ರವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಚೊಕ್ಕಬೆಟ್ಟು ಜಾಮಿಯ ಪಿಯು ಕಾಲೇಜಿನ ಪ್ರಾಂಶುಪಾಲರಾದ ಅಬೂಬಕರ್ ಅವರು ವೈಫಲ್ಯತೆಯನ್ನು ಎದುರಿಸುವ ಮಾನಸಿಕ ಸಿದ್ಧತೆ ಬಗ್ಗೆ ಮಾತನಾಡಿದರು.

ಬದ್ರಿಯಾ ಪ್ರಥಮ ದರ್ಜೆ ಕಾಲೇಜು, ಮಂಗಳೂರು ಇದರ ಪ್ರಾಂಶುಪಾಲರಾದ ಪ್ರೊಫೆಸರ್ ರಹಮತ್ ಅಲಿ ಅವರು ಪ್ರಾಸ್ಥಾವಿಕವಾಗಿ ಮಾತನಾಡುತ್ತಾ, ಎನ್ ಎಸ್ ಎಸ್ ಶಿಬಿರದ ದ್ಯೇಯೋದ್ದೇಶ ಗಳನ್ನು ವಿವರಿಸಿದರು..

ಶಿಬಿರಾಧಿಕಾರಿ ಡಾ.ಅಮಿತಾ, ಉಪ ಪ್ರಾಂಶುಪಾಲರಾದ ಡಾ.ರಮೇಶ್, ಸ್ಟ್ಯಾನಿ, ವಾಣಿಜ್ಯ ಶಾಸ್ತ್ರದ ಉಪನ್ಯಾಸಕ, ಉಪನ್ಯಾಸಕಿಯರು ಉಪಸ್ಥಿತರಿದ್ದರು.

ಮೊಹಮ್ಮದ್ ಆಶಿಕ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮದ ನಿರ್ವಹಣೆ ರಿಷಾನ ಅವರು ಮಾಡಿದರು. ಕುಮಾರಿ ಸಫ್ವಾನಾ ಸ್ವಾಗತಿಸಿದರು. ಶಂಶುದ್ದೀನ್ ಧನ್ಯವಾದ ಅರ್ಪಿಸಿದರು.