ಕಣ್ಣೂರು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ-ಕಣ್ಣೂರು ಅಲ್ ಬಿರ್ರ್ ಶಾಲೆಯ ಶಾಲಾ ಘಟಿಕೋತ್ಸವ

ಕಣ್ಣೂರು: ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಯುತ ಆಯುಧವಾಗಿದೆ. ಕಠಿಣ ಪರಿಶ್ರಮ, ಬದ್ಧತೆ, ಸಮಯ ಪ್ರಜ್ಞೆ,ತಾಳ್ಮೆ,ಆತ್ಮವಿಶ್ವಾಸ ಈ ಎಲ್ಲಾ ಗುಣಗಳು ಮಕ್ಕಳು ತಮ್ಮ ಬಾಲ್ಯದಲ್ಲಿ ಅಳವಡಿ ಸದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಹಾಗೆಯೇ ಈ ದಿನವು ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಅತ್ಯುತ್ತಮ ವಾದ ದಿನವಾಗಿದೆ ಎಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ನಿಯಾಝ್ ಪಣಕಜೆ ಅಭಿಪ್ರಾಯ ಪಟ್ಟರು.













ಇವರು ಕಣ್ಣೂರು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಕಣ್ಣೂರು ಅಲ್ ಬಿರ್ರ್ ಶಾಲೆಯ ಶಾಲಾ ಘಟಿಕೋತ್ಸವ - Genesis ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಸ್ ಮಹಮ್ಮದ್ ಅವರು ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ರಿಯಾಝ್ ಅಹಮದ್ ಕೆ. ಬಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಡಾ. ಹೈದರ್ ಇವರು ಮಕ್ಕಳಿಗೆ ಹಿತನುಡಿಗಳನ್ನು ನೀಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗು ಅಲ್ ಬಿರ್ರ್ ಕೊರ್ಡಿನೇಟರ್   ಸಿತಾರ್ ಅಬ್ದುಲ್ ಮಜೀದ್ ಹಾಗೂ ಸದಸ್ಯರಾದ ಹೈದರ್ ಹಾಜಿ ಹಾಗೂ ಹಮೀದ್ ರವರು ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಸರ್ವರನ್ನು ಸ್ವಾಗತಿಸಿದರು, ಶಿಕ್ಷಕಿ ಶೈಮ ಧನ್ಯವಾದವಿತ್ತರು. ಶಿಕ್ಷಕಿ ಜಯಲತ ಕಾರ್ಯಕ್ರಮ ನಿರೂಪಿಸಿದರು.