ಉಚ್ಚಿಲ; ಮೇ 10ರಂದು 'ಪೊಲ್ಯ ಪ್ರೀಮಿಯರ್ ಲೀಗ್ 2026 ಸೀಸನ್-3' ಕ್ರಿಕೆಟ್ ಪಂದ್ಯಾಟ

ಉಚ್ಚಿಲ: 'ಪೊಲ್ಯ ಪ್ರೀಮಿಯರ್ ಲೀಗ್ 2026 ಸೀಸನ್ 3' ಕ್ರಿಕೆಟ್ ಪಂದ್ಯಾಟ ಮೇ 10ರಂದು ಉಚ್ಚಿಲ ಪೊಲ್ಯದ ಮೈದಾನದಲ್ಲಿ ನಡೆಯಲಿದೆ.

ಕಿರಿಯರಲ್ಲಿರುವ ಕ್ರಿಕೆಟ್ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಈ ಪಂದ್ಯಾಟವನ್ನು ಆಯೋಜಿಸಲಾಗಿದ್ದು, ಸುಮಾರು 70ರಷ್ಟು ಮಂದಿ ಆಟಗಾರರು ಪಾಲ್ಗೊಳ್ಳಲಿದ್ದಾರೆ.






ಈ ಕ್ರಿಕೆಟ್ ಪಂದ್ಯಾಟದಲ್ಲಿ ಪೊಲ್ಯದ 4 ಬಲಿಷ್ಠ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಟ ನಡೆಸಲಿವೆ. ನಿಸಾರ್ ನೇತೃತ್ವದ 'ಟೀಮ್ ಪೊಲ್ಯ', ಮಜೀದ್ ನೇತೃತ್ವದ 'ಪೊಲ್ಯ ಬ್ಲಾಸ್ಟರ್ಸ್', ರಫೀಕ್ ಪಯ್ಯಾರ್ ನೇತೃತ್ವದ 'ಪೊಲ್ಯ ಸ್ಟ್ರೈಕರ್ಸ್' ಹಾಗು ಶಮೀಮ್(ಶಣ್ಣ)-ಇಮ್ರಾನ್(ಇಂಬು) ನೇತೃತ್ವದ 'ಫ್ರೆಂಡ್ಸ್ ಪೊಲ್ಯ' ತಂಡಗಳು ಭಾಗವಹಿಸಲಿವೆ.

ಸೌದಿ ಅರೇಬಿಯಾ, ದುಬೈ, ಒಮಾನ್(ಮಸ್ಕತ್) ನಲ್ಲಿರುವ ಪೊಲ್ಯ ಮೂಲದವರ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಪಂದ್ಯಾಟವು ಮೇ 10ರಂದು  ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಲಿದ್ದು, ಈ ಪಂದ್ಯಾಟದ ನೇರ ಪ್ರಸಾರ ಕಾರ್ಯಕ್ರಮವು ಗಲ್ಲಿ ಮ್ಯಾಚ್ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.