ಜನರ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ: ಹಿರಿಯಡ್ಕ ಸುತ್ತಮುತ್ತ ಮತಯಾಚನೆ ನಡೆಸಿದ ಜಯಪ್ರಕಾಶ್ ಹೆಗ್ಡೆ

ಜನರ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ: ಹಿರಿಯಡ್ಕ ಸುತ್ತಮುತ್ತ ಮತಯಾಚನೆ ನಡೆಸಿದ ಜಯಪ್ರಕಾಶ್ ಹೆಗ್ಡೆ

ಹಿರಿಯಡ್ಕ: ನಮ್ಮ ಜಿಲ್ಲೆಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿ ಉದ್ಯೋಗ ಸೃಷ್ಟಿಯಾಗುವಂತ ವಾತಾವರಣವನ್ನು ಮಾಡಬೇಕಾಗಿರುವ ಜನಪ್ರತಿನಿಧಿಗಳು ಕೈಚೆಲ್ಲಿ ಕೂತಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಹಿರಿಯಡ್ಕ ಸಮೀಪದಲ್ಲಿರುವ ಜಿನೆಸಿಸ್ ಕಂಪನೆಯಲ್ಲಿ ಮತಪ್ರಚಾರ ಮಾಡಿದ ಹೆಗ್ಡೆ ಅವರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಉಳಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರೂ ಇಲ್ಲಿನ ಜನಪ್ರತಿನಿಧಿಗಳ ಕಾರಣದಿಂದಲೇ ಶಾಶ್ವತವಾಗಿ ಮುಚ್ಚುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾನು ಅಧಿಕಾರದಲ್ಲಿದ್ದಾಗ ಇಲ್ಲಿನ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೆ. ಜನರ ಕಷ್ಟಗಳನ್ನು ಆಲಿಸಿ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ತನಗೆ ಒಂದು ಅವಕಾಶವನ್ನು ನೀಡಿ ಎಂದು ಹೆಗ್ಡೆ ಮನವಿ ಮಾಡಿದರು.

ಬಳಿಕ ಹಿರಿಯಡ್ಕ ಸಮೀಪದಲ್ಲಿರುವ ಮೆಸ್ಸಿಲೀ ಇಂಡಿಯಾ ಪ್ಯಾಕರ್ಸ್ ಕಂಪನೆಗೆ ತೆರಳಿದ ಹೆಗ್ಡೆ, ಅಲ್ಲಿನ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಮತ ಯಾಚನೆ ನಡೆಸಿದರು. 










Ads on article

Advertise in articles 1

advertising articles 2

Advertise under the article