ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಯೋಜಕರಾಗಿ ಗಣೇಶ್ ರಾಜ್ ಸರಳಬೆಟ್ಟು ಆಯ್ಕೆ
ಉಡುಪಿ. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿರಿಯ ನಾಯಕರ ಶಿಫಾರಸಿನ ಮೇರೆಗೆ. ಸಾಮಾಜಿಕ ಕಾರ್ಯಕರ್ತರು ಆದ ಗಣೇಶ್ ರಾಜ್ ಸರಳಬೆಟ್ಟು ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕ (ಸಾಮಾಜಿಕ ಜಾಲತಾಣ) ರನ್ನಾಗಿ ನೇಮಕ ಮಾಡಿ ಆದೇಶ ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಸದಸ್ಯರಾದ. ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಬ್ಲಾಕ್ ಕಾಂಗ್ರೆಸ್ ನ ನಿಕಟ ಪೂರ್ವ ಅಧ್ಯಕ್ಷರಾದ, ದಿವಾಕರ್ ಕುಂದರ್, ಕಾಂಗ್ರೆಸ್ ಮುಖಂಡ ಕೆ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಆಸ್ಕರ್ ಫರ್ನಾಂಡೀಸ್ ಅವರ ದೆಹಲಿಯ ಆಪ್ತರೂ ಆದ ರವಿ ಶೆಟ್ಟಿ ಅಂಬಲಪಾಡಿ, ಉಡುಪಿ ಬ್ಲಾಕ್ ಕಾಂಗ್ರೆಸ್ಸಿನ ಮಾಧ್ಯಮ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಮೊದಲಾದವರು ಜೊತೆಗಿದ್ದು ಶುಭ ಹಾರೈಸಿದರು.
ಸರಳೆಬೆಟ್ಟು ಅವರು ಈ ಹಿಂದೆ ಕನ್ನಡ ಪರ ಸಂಘಟನೆಯಲ್ಲಿ ಮಾಧ್ಯಮ ವಕ್ತಾರರಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷದಲ್ಲಿ ತಳಮಟ್ಟದಲ್ಲಿ ಗುರುತಿಸಿಕೊಂಡು, ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ, ಉಡುಪಿಬ್ಲಾಕ್ ಕಾಂಗ್ರೆಸ್ ನಲ್ಲಿಯು ಜೊತೆ ಕಾರ್ಯದರ್ಶಿಯಾಗಿ ಹಾಗೂ ಪರ್ಕಳ ಕಾಂಗ್ರೆಸ್ ಸಮಿತಿಯಲ್ಲಿಯೂ ಗುರುತಿಸಿಕೊಂಡು, ಇದೀಗ ಜಿಲ್ಲಾ ಕಾಂಗ್ರೆಸ್ನ ಪ್ರಚಾರ ಸಮಿತಿಯ ಸಂಯೋಜಕರಾಗಿ ಆಯ್ಕೆಯಾಗಿದ್ದಾರೆ.