ಮೋದಿ ಸಂಪುಟದಲ್ಲಿ ಇಬ್ಬರು ಬ್ರಾಹ್ಮಣರಿಗೆ, ಇಬ್ಬರು ಒಕ್ಕಲಿಗರಿಗೆ ಹಾಗು ಓರ್ವ ಲಿಂಗಾಯತ ಸಮುದಾಯದವರಿಗೆ ಸ್ಥಾನ!
ಬೆಂಗಳೂರು: ಈ ಬಾರಿ ಕೇಂದ್ರ ಬಿಜೆಪಿ ಸಂಪುಟದಲ್ಲಿ ಜಾತಿ ಸಮೀಕರಣದ ಹಿನ್ನೆಲೆಯಲ್ಲಿ ಇಬ್ಬರು ಬ್ರಾಹ್ಮಣರಿಗೆ, ಇಬ್ಬರು ಒಕ್ಕಲಿಗರಿಗೆ ಹಾಗು ಓರ್ವ ಲಿಂಗಾಯತ ಸಮುದಾಯದವರಿಗೆ ಸ್ಥಾನ ನೀಡಲಾಗಿದೆ. ರಾಜ್ಯದಿಂದ 19 ಸಂಸದರನ್ನು ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.
ಬ್ರಾಹ್ಮಣ ಸಮಾಜದಿಂದ ಪ್ರಲ್ಹಾದ ಜೋಶಿ ಎರಡನೇ ಬಾರಿ ಸಂಪುಟ ಸೇರ್ಪಡೆಯಾಗಿದ್ದಾರೆ. ಜತೆಗೆ ನಿರ್ಮಲಾ ಸೀತಾರಾಮನ್ ಸ್ಥಾನ ಗಳಿಸಿದ್ದಾರೆ. ನಿರ್ಮಲಾ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕಳೆದ ಅವಧಿಯಲ್ಲಿ ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜೋಶಿ ಹಾಗು ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ.
ಒಕ್ಕಲಿಗ ಸಮುದಾಯಧಿದಿಂದ ಎನ್‌ಡಿಎ ಅಂಗಪಕ್ಷ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿಯ ಶೋಭಾ ಕರಂದ್ಲಾಜೆ ಸಂಪುಟ ಸೇರ್ಪಡೆಯಾಗಿದ್ದಾರೆ. ಲಿಂಗಾಯತರಲ್ಲಿ ತುಮಕೂರು ಸಂಸದರಾಗಿ ಆಯ್ಕೆಯಾಗಿರುವ ವಿ.ಸೋಮಣ್ಣ ಸ್ಥಾನ ಪಡೆದಿದ್ದಾರೆ.
ಆಕಾಂಕ್ಷಿಗಳೂ ಹಲವರಿದ್ದರು. ಆದರೆ, ಸಾಂಪ್ರದಾಯಿಕ ಸೂತ್ರದಂತೆ ಮೇಲ್ವರ್ಗದ ಮೂರು ಸಮುದಾಯಧಿಗಳಿಗೆ ಮಾತ್ರ ಅವಕಾಶ ದೊರಕಿದೆ. ಮುಂದಿನ ದಿನಗಳಲ್ಲಿ ಜಾತಿ ಸಮೀಕರಣದ ಸಮತೋಲನ ನಿರೀಕ್ಷಿಸಲಾಗಿದೆ. ರಾಜ್ಯದಿಂದ ಸಂಪುಟ ಸೇರಿದವರಲ್ಲಿ ನಿರ್ಮಲಾ ಸೀತಾರಾಮನ್, ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಸಂಪುಟ ದರ್ಜೆ ಸಚಿವರು. ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಅವರನ್ನು ರಾಜ್ಯ ದರ್ಜೆ ಸಚಿವರಾಗಿ ನೇಮಿಸಿಕೊಳ್ಳಲಾಗಿದೆ.
ಈ ಬಾರಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುಧಿವುದು ಫಲ ನೀಡಿದ್ದು, ಒಕ್ಕಲಿಗರು ಗರಿಷ್ಠ ಪ್ರಮಾಣದಲ್ಲಿಎನ್‌ಡಿಎಗೆ ಮತ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನದ ಜತೆಗೆ ಬಿಜೆಪಿ ಕಡೆಯಿಂದಲೂ ಶೋಭಾ ಕರಂದ್ಲಾಜೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಒಕ್ಕಲಿಗರು ಹೆಚ್ಚು ಬೆಂಬಲಿಸಿದ್ದರಿಂದ ಹೈಕಮಾಂಡ್ ಸಮಾಧಾನಗೊಂಡಿದೆ. ಹಾಗಾಗಿ 2 ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.