
ಉಡುಪಿಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಎಷ್ಟು ಮತಗಳ ಅಂತರದಲ್ಲಿ ಗೆದ್ದಿದ್ದಾರೆ...? ಕ್ಷೇತ್ರವಾರು ಸಿಕ್ಕಿದ ಮತಗಳೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ
ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಎರಡೂವರೆ ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.
ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ತನ್ನ ಪ್ರಬಲ ಎದುರಾಳಿ ಕಾಂಗ್ರೆಸ್ ಪಕ್ಷದ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಯಾರೂ ಸಹ ಊಹಿಸದ ರೀತಿಯಲ್ಲಿ 2,58,903 ಮತಗಳ ಅಂತರದಿಂದ ಪರಾಭವಗೊಳಿಸಿ ಕರಾವಳಿಯಲ್ಲಿ ಬಿಜೆಪಿಯ ಪಾರಮ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.
ವಿಧಾನಸಭೆ ಕ್ಷೇತ್ರವಾರು ಫಲಿತಾಂಶ ಪಟ್ಟಿ
1 ಉಡುಪಿ:
ಕೋಟ: 106022, ಜಯಪ್ರಕಾಶ್ ಹೆಗ್ಡೆ (ಜೆಪಿ): 62506
2 ಕಾಪು:
ಕೋಟ: 91077 ಜೆಪಿ: 58947
3 ಕುಂದಾಪುರ:
ಕೋಟ: 107173 ಜೆಪಿ: 57078
4 ಕಾರ್ಕಳ
ಕೋಟ: 57429 ಜೆಪಿ: 33098
5 ಶ್ರಿಂಗೇರಿ
ಕೋಟ: 79175 ಜೆಪಿ: 53937
6 ಮೂಡಿಗೆರೆ
ಕೋಟ: 74597 ಜೆಪಿ: 54572
7 ತರೀಕೆರಿ
ಕೋಟ: 80995 ಜೆಪಿ: 60314
8 ಚಿಕ್ಕಮಗಳೂರು
ಕೋಟ: 92429 ಜೆಪಿ: 68693
ಕ್ಷೇತ್ರದ ಫಲಿತಾಂಶ ಹೀಗಿದೆ:
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ 10 ಮಂದಿ ಅಭ್ಯರ್ಥಿಗಳು ಅಂತಿಮವಾಗಿ ಪಡೆದಿರುವ ಮತಗಳ ವಿವರ ಹೀಗಿದೆ.
ಒಟ್ಟು ಮತಗಳು (ಅಂಚೆಮತಗಳು ಸೇರಿ): 12,28,010
ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) 7,31,408
ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್) 4,72,505
ಕೆ.ಟಿ.ರಾಧಾಕೃಷ್ಣ (ಬಿಎಸ್ಪಿ) 6414
ಎಂ.ಕೆ.ದಯಾನಂದ (ಪಿಎಸ್‌ಎಸ್‌ಪಿ) 1069
ಎಲ್.ರಂಗನಾಥ ಗೌಡ (ಕೆಆರ್‌ಎಸ್) 539
ಶಬರೀಶ್ ಆರ್.(ಕರುನಾಡ ಸೇವಕರ ಪಕ್ಷ) 564
ಸಚಿನ್ ಬಿ.ಕೆ.(ಯುಪಿಪಿ) 1331
ಸುಪ್ರೀತ್‌ಕುಮಾರ್ ಪೂಜಾರಿ(ಜನಹಿತ) 690
ವಿಜಯಕುಮಾರ್ ಎಂ.ಜಿ. (ಪಕ್ಷೇತರ) 955
ಸುಧೀರ್‌ಕಾಂಚನ್ (ಪಕ್ಷೇತರ) 2278
ನೋಟಾ ಮತಗಳು 11,257
ಗೆಲುವಿನ ಅಂತರ 2,58,903