ಮತದಾನೋತ್ತರ ಸಮೀಕ್ಷೆಯಿಂದಾಗಿ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರ 30 ಲಕ್ಷ ಕೋಟಿ ರೂ. ನಷ್ಟ; ಜಂಟಿ ಸದನ ತನಿಖೆಗೆ ರಾಹುಲ್ ಗಾಂಧಿ ಒತ್ತಾಯ

ಮತದಾನೋತ್ತರ ಸಮೀಕ್ಷೆಯಿಂದಾಗಿ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರ 30 ಲಕ್ಷ ಕೋಟಿ ರೂ. ನಷ್ಟ; ಜಂಟಿ ಸದನ ತನಿಖೆಗೆ ರಾಹುಲ್ ಗಾಂಧಿ ಒತ್ತಾಯ

 

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಜೂನ್ 4 ರಂದು ಷೇರು ಮಾರುಕಟ್ಟೆಯಲ್ಲಾದ ದೊಡ್ಡ ಕುಸಿತದ ಹಿಂದೆ ದೊಡ್ಡ ಹಗರಣದ ಕಾರಣವಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಹಗರಣ'ದಿಂದ ಹೂಡಿಕೆದಾರರ 30 ಲಕ್ಷ ಕೋಟಿ ರೂ. ನಷ್ಟಕ್ಕೆ ಕಾರಣವಾಗಿದ್ದು, ಇದರ ಬಗ್ಗೆ ಜಂಟಿ ಸದನ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.

ಜೂನ್ 1 ರಂದು ನಡೆದ ಮತದಾನೋತ್ತರ ಸಮೀಕ್ಷೆ ನಂತರ ಷೇರು ಮಾರುಕಟ್ಟೆಗಳು ಏರಿಕೆ ಕಂಡಿದ್ದವು. ಮೂರು ದಿನಗಳ ನಂತರ ಕುಸಿತದ ಷೇರು ಮಾರುಕಟ್ಟೆ ಸೂಚ್ಯಂಕ ತಲೆಕೆಳಗಾಗಿತ್ತು.

ಚುನಾವಣೋತ್ತರ ಸಮೀಕ್ಷೆಗಳದ್ದು ಸರಿಯಾಗಿಲ್ಲ ಎಂಬ ಮಾಹಿತಿ ಬಿಜೆಪಿ ನಾಯಕರಿಗೆ ಇತ್ತು ಎಂದು ರಾಹುಲ್ ಆರೋಪಿಸಿದ್ದಾರೆ.

"ಪ್ರಧಾನಿ ಮೋದಿ, ಗೃಹ ಸಚಿವ ಶಾ ಮತ್ತು ಎಕ್ಸಿಟ್ ಪೋಲ್ ನಡೆಸಿದವರ ವಿರುದ್ಧ ತನಿಖೆ ಬಯಸುತ್ತೇವೆ. ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವರು ಷೇರು ಮಾರುಕಟ್ಟೆಯ ಬಗ್ಗೆ ಪ್ರತಿಕ್ರಿಯಿಸಿರುವುದನ್ನು ನಾವು ಮೊದಲ ಬಾರಿಗೆ ಗಮನಿಸಿದ್ದೇವೆ" ಎಂದರು.

ಪ್ರಧಾನಿ ಮತ್ತು ಗೃಹ ಸಚಿವರು ಜನರಿಗೆ ಹೂಡಿಕೆ ಸಲಹೆಯನ್ನು ಏಕೆ ನೀಡಿದರು ಪ್ರಶ್ನಿಸಿದ ಗಾಂಧಿ, ಎಕ್ಸಿಟ್ ಪೋಲ್‌ ಸಮೀಕ್ಷೆ ಸುಳ್ಳು ಎಂಬುದು ಬಿಜೆಪಿ ನಾಯಕರಿಗೆ ಮಾಹಿತಿ ಇತ್ತು. ಸ್ಟಾಕ್ ಮಾರುಕಟ್ಟೆಯ ಅತಿದೊಡ್ಡ ಹಗರಣದ ಬಗ್ಗೆ ಜೆಪಿಸಿ ತನಿಖೆಯನ್ನು ಬಯಸುತ್ತೇವೆ" ಎಂದು ಅವರು ಹೇಳಿದರು.

ಬಿಜೆಪಿಯ ಉನ್ನತ ವ್ಯಕ್ತಿಗಳು ಈ ಷೇರು ಮಾರುಕಟ್ಟೆ ಹಗರಣ ನಡೆಸಿದ್ದಾರೆ ಮತ್ತು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ನೇರವಾಗಿ ಭಾಗಿಯಾಗಿದ್ದಾರೆ. "ಪ್ರಧಾನಿ ಮೋದಿ, ಗೃಹ ಸಚಿವ ಶಾ ಮತ್ತು ಎಕ್ಸಿಟ್ ಪೋಲ್ ನಡೆಸಿದವರ ವಿರುದ್ಧ ತನಿಖೆ ನಡೆಯಬೇಕೆಂದು ಬಯಸುತ್ತೇವೆ" ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು.

Ads on article

Advertise in articles 1

advertising articles 2

Advertise under the article