ಕಳ್ಳತನಕ್ಕೆಂದು ಬಂದು ಎಸಿಯ ಗಾಳಿಗೆ ಗಾಢ ನಿದ್ದೆಗೆ ಜಾರಿದ ಕಳ್ಳ! ಮುಂದೆ ಏನಾಯಿತು ನೋಡಿ...?
ಲಕ್ನೋ : ಕಳ್ಳತನ ಮಾಡಲು ಬಂದ ಕಳ್ಳನೊಬ್ಬ ಎಸಿಯ ಗಾಳಿಗೆ ಗಾಢ ನಿದ್ದೆಗೆ ಜಾರಿದ ಘಟನೆಯೊಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಕುಡುಕ ಕಳ್ಳನೊಬ್ಬ ಕಳ್ಳತನ ಮಾಡಲು ಬೀಗ ಹಾಕಿರುವ ಮನೆಗೆ ನುಗ್ಗಿ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ನಂತರ ಅಲ್ಲೇ ಮಲಗಿದ್ದಾನೆ. ಬೆಳಗ್ಗೆ ಎದ್ದಾಗ ಪೋಲೀಸರು ಎದುರು ನಿಂತಿರುವುದನ್ನು ಕಂಡು ಕಳ್ಳ ಕಂಗಾಲಾಗಿದ್ದಾನೆ. ಕಪಿಲ್ ಕಶ್ಯಪ್ ಎಂಬ ಕಳ್ಳನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕಳವು ಮಾಡಲು ಬಂದ ಮನೆ ಡಾ. ಸುನೀಲ್ ಪಾಂಡೆ ಎಂಬುವವರಿಗೆ ಸೇರಿದ್ದು, ಘಟನೆಯ ಸಮಯದಲ್ಲಿ ಅವರು ಮನೆಯಲ್ಲಿ ಇಲ್ಲದ ಕಾರಣ ಕಳ್ಳ ಮನೆಯ ಗೇಟ್ ತೆರೆದು ಮನೆಯೊಳಗೆ ಕಳ್ಳತನಕ್ಕೆ ಬಂದಿದ್ದಾನೆ. ಮದ್ಯ ಸೇವಿಸಿ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿ ಮನೆಯ ಒಳಗೆ ಹೋಗಿದ್ದಾನೆ. ಮನೆಯಲ್ಲಿ ಎಸಿ ಆನ್ ಇರುವುದು ಕಂಡು, ಸ್ವಲ್ಪ ಸಮಯ ವಿಶ್ರಾಂತಿ ಮಾಡಿ ಕಳ್ಳತನ ಮಾಡಲೆಂದು ವ್ಯಕ್ತಿ ಸೋಫಾದ ಬಳಿ ಎಸಿಯ ತಣ್ಣಗೆಯ ಗಾಳಿಗೆ ಕೂತಿದ್ದಾನೆ.
ಮನೆಯ ಮಾಲೀಕ ಮನೆಯಲ್ಲಿ ಇಲ್ಲದೆ ಇದ್ದಾಗ, ಮನೆಯ ಗೇಟ್ ಹೇಗೆ ತೆರೆದಿದೆ ಎಂದು ಅಕ್ಕಪಕ್ಕದವರು ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ಡಾ. ಪಾಂಡೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಏರ್ ಕಂಡಿಷನರ್ ಆನ್ ಮಾಡಿ ಆರಾಮವಾಗಿ ಮಲಗಿದ್ದ ವ್ಯಕ್ತಿಯನ್ನು ಕಂಡಿದ್ದಾರೆ. ವ್ಯಕ್ತಿಯನ್ನು ಎಚ್ಚರಿಸಿ ವಿಚಾರಿಸಿದಾಗ ಆತ ಕಳ್ಳತನಕ್ಕೆಂದು ಮನೆಯೊಳಗಡೆ ಬಂದಿದ್ದಾಗಿ ಹೇಳಿದ್ದಾನೆ. ಸದ್ಯ ಪೊಲೀಸರು ಕಳ್ಳನನ್ನು ಅರೆಸ್ಟ್ ಮಾಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದೆಂದು ಪೊಲೀಸರು ಹೇಳಿದ್ದಾರೆ.